Home ಕರಾವಳಿ ಚಂದ್ರದರ್ಶನದ ವಿಚಾರದಲ್ಲಿ ಒಮ್ಮತದ ತೀರ್ಮಾನಕ್ಕೆ ಮನವಿ

ಚಂದ್ರದರ್ಶನದ ವಿಚಾರದಲ್ಲಿ ಒಮ್ಮತದ ತೀರ್ಮಾನಕ್ಕೆ ಮನವಿ

ಮಂಗಳೂರು: ಚಂದ್ರ ದರ್ಶನದ ಹಿನ್ನೆಲೆಯಲ್ಲಿ ಇಸ್ಲಾಮಿಕ್ ತಿಂಗಳುಗಳನ್ನು ಲೆಕ್ಕ ಹಾಕಲಾಗುತ್ತದೆ. ಈ ಹಿನ್ನೆಲೆಯಲ್ಲಿ  ಚಂದ್ರ ದರ್ಶನದ ವಿಚಾರದಲ್ಲಿ ಖಾಝಿಗಳು ಒಮ್ಮತದ ಅಭಿಪ್ರಾಯ ತಿಳಿಸಬೇಕೆಂದು ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಮನವಿ ಮಾಡಿದ್ದಾರೆ.

ಈದುಲ್ ಫಿತ್ರ್  ಆಚರಣೆ ವಿಚಾರದಲ್ಲಿ ಮಂಗಳೂರು ಉಡುಪಿ ಮಾತ್ರವಲ್ಲದೆ ಕಾಸರಗೋಡಿನ ಖಾಝಿಗಳು ಜೊತೆಯಾಗಿ ಒಮ್ಮತದ ತೀರ್ಮಾನ ಕೈಗೊಳ್ಳಬೇಕೆಂದು ವಿನಂತಿಸಿದ್ದಾರೆ. ರಮಝಾನ್ ಹಬ್ಬದ ಚಂದ್ರದರ್ಶನದ ಸಂದರ್ಭದಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

Join Whatsapp
Exit mobile version