ಸ್ವಯಂ ಕೋವಿಡ್‌ ಸೋಂಕು ತಗುಲಿಸಿಕೊಂಡಿದ್ದ ಜೆಕ್‌ ಗಣರಾಜ್ಯದ ಗಾಯಕಿ ನಿಧನ

Prasthutha|

ಪೆರುಗ್ವೆ: ಸ್ವಯಂ ಕೋವಿಡ್‌ ಸೋಂಕು ತಗುಲಿಸಿಕೊಂಡಿದ್ದ ಜೆಕ್‌ ಗಣರಾಜ್ಯದ ಖ್ಯಾತ ಜಾನಪದ ಗಾಯಕಿ ಹನ ಹೊರ್ಕಾ(57) ನಿಧನರಾಗಿದ್ದಾರೆ.

- Advertisement -

ಹನ ಹೊರ್ಕಾ ಅವರ ಪತಿ ಹಾಗೂ ಮಗನಿಗೆ ಕೋವಿಡ್‌ ಸೋಂಕು ದೃಢಪಟ್ಟಿತ್ತು. ಹನ ಹೊರ್ಕಾಗೆ ಕೋವಿಡ್‌ ತಗುಲಿರಲಿಲ್ಲ. ಆದರೆ ಗಾಯನದ ಸಲುವಾಗಿ ವಿವಿಧ ಸಾರ್ವಜನಿಕ ಸ್ಥಳಗಳಿಗೆ ತೆರಳಲಿಕ್ಕಾಗಿಯೇ ಹನ ಹೊರ್ಕಾ ಸ್ವಯಂ ಸೋಂಕು ತಗುಲಿಸಿಕೊಂಡರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಜೆಕ್‌ ಗಣರಾಜ್ಯದಲ್ಲಿ ಲಸಿಕೆ ಪಡೆದವರು ಮತ್ತು ಕೋವಿಡ್‌ ಸೋಂಕಿನಿಂದ ಚೇತರಿಸಿಕೊಂಡವರು ತಮ್ಮ ವಿವರಗಳನ್ನು ನೀಡಿ ಸಾರ್ವಜನಿಕ ಸ್ಥಳಗಳು, ಬಾರ್‌, ಪಬ್‌, ಕೆಫೆ, ಸಿನಿಮಾ ಮಂದಿರ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರಳಲು ಅವಕಾಶವಿದೆ.

- Advertisement -

“ಬಾರ್‌, ಕೆಫೆ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರಳಲಿಕ್ಕಾಗಿಯೇ ನನ್ನ ತಾಯಿ ಸ್ವಯಂ ಕೋವಿಡ್‌ ಸೋಂಕು ತಗುಲಿಸಿಕೊಂಡರು. ಆದರೆ ಅವರು ಗುಣಮುಖರಾಗಲಿಲ್ಲ” ಎಂದು ಹನ ಹೊರ್ಕಾ ಅವರ ಮಗ ರೆಕ್ಸ್‌ ಹೇಳಿದ್ದಾರೆ.

Join Whatsapp
Exit mobile version