Home ಟಾಪ್ ಸುದ್ದಿಗಳು ಯಡಿಯೂರಪ್ಪಗೆ ಮತ್ತೊಂದು ಶಾಕ್: 300 ಕೋಟಿ ಅನುದಾನ ಅಕ್ರಮ ತನಿಖೆಗೆ ಸಮಿತಿ ರಚನೆ

ಯಡಿಯೂರಪ್ಪಗೆ ಮತ್ತೊಂದು ಶಾಕ್: 300 ಕೋಟಿ ಅನುದಾನ ಅಕ್ರಮ ತನಿಖೆಗೆ ಸಮಿತಿ ರಚನೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ಕೋವಿಡ್ ಬಳಿಕ ಕೆಕೆಆರ್‌ ಡಿಬಿ ಅಕ್ರಮದ ಕುರಿತು ತನಿಖೆಗೆ ಸರ್ಕಾರ ತಂಡ ರಚಿಸಿದೆ.

ಕೋವಿಡ್ ಹಗರಣದ ತನಿಖೆಗೆ ಬಳಿಕ ಯಡಿಯೂರಪ್ಪ ವಿರುದ್ಧ ಮತ್ತೊಂದು ಹಗರಣದ ತನಿಖೆಗೆ ಸರ್ಕಾರ ಸಮಿತಿ ರಚನೆ ಮಾಡಿದೆ. ಕಲ್ಯಾಣ-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಕೆಆರ್‌ ಡಿಬಿ) ಅಕ್ರಮದ ಕುರಿತು ತನಿಖೆಗೆ ಆದೇಶ ಹೊರಡಿಸಿದೆ. 300 ಕೋಟಿ ಅನುದಾನ ಅಕ್ರಮ ಆಗಿದೆ ಎಂದು ತನಿಖೆಗೆ ಸಮಿತಿ ರಚನೆ ಮಾಡಿದೆ.

2020-2023ರ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘ ರಚನೆ ಮಾಡಲಾಗಿತ್ತು. ಈ ಅವಧಿಯಲ್ಲಿ ದತ್ತಾತ್ರೇಯ ಪಾಟೀಲ್ ರೇವೂರ್ ಅಧ್ಯಕ್ಷರಾಗಿದ್ದರು. ಆಗ ಯಡಿಯೂರಪ್ಪ ಅವರು ಸಿಎಂ ಆಗಿದ್ದರು. ಪ್ರತಿ ವರ್ಷ 100 ಕೋಟಿಯಂತೆ 300 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು.

ಈ ಅನುದಾನದಲ್ಲಿ ದುರ್ಬಳಕೆ ಆಗಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಗೆ ಸಮಿತಿ ರಚನೆ ಮಾಡಿದೆ.

Join Whatsapp
Exit mobile version