ಆಂಧ್ರ ಪ್ರದೇಶ | ಕಿಯಾ ಮೋಟರ್ಸ್ ಘಟಕದಿಂದ 900 ಎಂಜಿನ್‌ ಕಳ್ಳತನ: 9 ಮಂದಿ ಬಂಧನ

- Advertisement -

ಪೆನುಕೊಂಡ: ಆಂಧ್ರಪ್ರದೇಶದ ಶ್ರೀ ಸತ್ಯ ಸಾಯಿ ಜಿಲ್ಲೆಯಲ್ಲಿನ ಕಿಯಾ ಮೋಟರ್ಸ್ ಘಟಕವೊಂದರಿಂದ 900 ಎಂಜಿನ್‌ ಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ‌ದಂತೆ ಒಂಬತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಪೆನುಕೊಂಡ ನ್ಯಾಯಾಲಯವು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಅಟೊಮೊಬೈಲ್ ಉದ್ಯಮವನ್ನು ಬೆಚ್ಚಿಬೀಳಿಸಿದ್ದ ಬೃಹತ್‌ ಪ್ರಮಾಣದ ಕಳ್ಳತನದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

‘ಕೇವಲ 10 ಶೇಕಡದಷ್ಟು ಮಾತ್ರ ತನಿಖೆ ಪೂರ್ಣಗೊಂಡಿದೆ. ಕಳವು ಮಾಡಿರುವ ಎಂಜಿನ್‌ ಗಳನ್ನು ಆರೋಪಿಗಳು ಹಲವು ರಾಜ್ಯಗಳಿಗೆ ಕಳ್ಳಸಾಗಾಣೆ ಮಾಡಿ ಮಾರಾಟ ಮಾಡುತ್ತಿದ್ದರು. ಆಂಧ್ರಪ್ರದೇಶದ ಗಡಿಯಾಚೆಗೂ ಅಕ್ರಮ ಜಾಲವೊಂದು ಸಕ್ರಿಯವಾಗಿರುವ ಮುನ್ಸೂಚನೆ ಸಿಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

‌ಕಿಯಾ ಅಧಿಕಾರಿಗಳು ಕಳೆದ ತಿಂಗಳು ಆಂತರಿಕ ಪರಿಶೀಲನೆ ನಡೆಸಿದ ವೇಳೆ ಎಂಜಿನ್‌ಗಳು ಕಳವಾಗಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಬಗ್ಗೆ ಮಾರ್ಚ್ 19ರಂದು ದೂರು ದಾಖಲಾಗಿತ್ತು.

- Advertisement -


Must Read

Related Articles