Home ಕರಾವಳಿ ಕುದ್ರೋಳಿ ಆಟೋ ಪಾರ್ಕ್ ನಲ್ಲಿ ಅಮೃತ ಮಹೋತ್ಸವ: ಅರ್ಹ ಫಲಾನುಭವಿಗಳಿಗೆ ವೀಲ್ ಚೇರ್ ವಿತರಣೆ

ಕುದ್ರೋಳಿ ಆಟೋ ಪಾರ್ಕ್ ನಲ್ಲಿ ಅಮೃತ ಮಹೋತ್ಸವ: ಅರ್ಹ ಫಲಾನುಭವಿಗಳಿಗೆ ವೀಲ್ ಚೇರ್ ವಿತರಣೆ

ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಕುದ್ರೋಳಿ ಅಟೋ ಪಾರ್ಕ್ ನಲ್ಲಿ ಆಚರಿಸಲಾಯಿತು.
ಇದೇ ವೇಳೆ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ವತಿಯಿಂದ ಅರ್ಹ ಫಲಾನುಭವಿಗಳಿಗೆ ವೀಲ್ ಚೇರ್ ಗಳನ್ನು ವಿತರಿಸಲಾಯಿತು.
ಇದೇ ವೇಳೆ ಹಲವಾರು ಯೂನಿಟ್ ರಕ್ತ ಸಂಗ್ರಹಿಸಿ ನೀಡಿದ ಹಾಗೂ ಕುದ್ರೋಳಿ ಆಟೋ ಪಾರ್ಕ್‌ಗೆ ಕುಡಿಯುವ ನೀರಿನ ಟ್ಯಾಂಕ್ ಕೊಡುಗೆಯಾಗಿ ನೀಡಿದ ವಾಯ್ಸ್ ಆಫ್ ಬ್ಲಡ್ ಡೋನರ್ಸ್ನ ಸ್ಥಾಪಕಾಧ್ಯಕ್ಷ ರವೂಫ್ ಬಂದರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಮತ್ತು ನಿವೃತ್ತ ಶಿಕ್ಷಕರಾದ ಹನೀಫ್ ಹಾಜಿ ಅವರನ್ನೂ ಇದೇ ವೇಳೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಕಾರ್ಪೋರೇಟರ್ ಅಬ್ದುಲ್ ಅಜೀಝ್ ಕುದ್ರೋಳಿ, ಕುದ್ರೋಳಿ ಆಟೋ ಪಾರ್ಕ್ನ ಪದಾದಿಕಾರಿಗಳು ಹಾಗೂ ಚಾಲಕರು ಸ್ವಚ್ಛತೆಗೆ ಆದ್ಯತೆಯನ್ನು ನೀಡಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಮಹನೀಯರನ್ನು ಗುರುತಿಸಿ ಸನ್ಮಾನಿಸುತ್ತಾ ಬಂದಿದ್ದಾರೆ. ಈ ಬಾರಿ ಒಬ್ಬರ ಜೀವ ಉಳಿಸುವ ಕಾರ್ಯ ಮಾಡುತ್ತಿರುವ ರವೂಫ್ ಬಂದರ್ ಅವರನ್ನು ಗೌರವಿಸಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು.


ಆರ್ ಸಿಎಂನ ಅಧ್ಯಕ್ಷ ಜುಬೈರ್, ಕಾರ್ಪೋರೇಟರ್ ಶಂಸುದ್ದೀನ್, ಎಸ್ ಡಿಪಿಐ ಮುಖಂಡ ಮುಝೈರ್, ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಮಹಿಳಾ ಘಟಕದ ಕಾರ್ಯದರ್ಶಿ ಆಲಿಷಾ ಅಮೀನ್ ಮತ್ತಿತರರು ಉಪಸ್ಥಿತರಿದ್ದರು. ಕಬೀರ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿದರು.

Join Whatsapp
Exit mobile version