ಬೆಂಗಳೂರು: ಬಾಬಾ ಸಾಹೇಬ್ ಬಿಆರ್ ಜನ್ಮದಿನದಂದು ಎಲ್ಲರಿಗೂ ನ್ಯಾಯ ದಿನದ ಶುಭಾಶಯ ತಿಳಿಸಿದ SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಬಿಆರ್ ಭಾಸ್ಕರ್ ಪ್ರಸಾದ್, ಅಂಬೇಡ್ಕರ್ ಈ ದೇಶದ ಅಸ್ಮಿತೆ ಎಂದಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಅವರು, ಅಂಬೇಡ್ಕರ್ ನಮ್ಮ ದೇಶಕ್ಕೆ ನೀಡಿರುವ ಸಂವಿಧಾನ ಇಡೀ ಜಗತ್ತಿಗೆ ಸಮಾನತೆಯ ಸಂದೇಶದಂತಿದೆ. ಅದರ ಜೊತೆಗೆ ಶೋಷಿತ ಸಮುದಾಯಗಳಿಗೆ ಶಿಕ್ಷಣ, ಸಂಘಟನೆ, ಹೋರಾಟ ಎಂಬ ಮಾರ್ಗವನ್ನೂ ಹಾಕಿಕೊಟ್ಟಿದ್ದಾರೆ. ಅದನ್ನು ಮರೆತಿರುವ ನಾವು ಪರೋಕ್ಷವಾಗಿ ಮನುವಾದಿಗಳಿಗೆ ಸಂವಿಧಾನ ಬದಲಾವಣೆ ಸಂಚಿಗೆ ಅವಕಾಶ ಮಾಡಿಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಎಲ್ಲರಿಗೂ ಸಾಮಾಜಿಕ ನ್ಯಾಯ ದಿನದ ಶುಭಾಶಯಗಳು ಎಂದು ಅವರು ತಿಳಿಸಿದ್ದಾರೆ.