Home ಕರಾವಳಿ ಮೂಡಬಿದಿರೆ ಕ್ಷೇತ್ರದ SDPI ಅಭ್ಯರ್ಥಿ ಅಲ್ಫೋನ್ಸ್ ಫ್ರಾಂಕೋ ಏ.17 ರಂದು ನಾಮಪತ್ರ ಸಲ್ಲಿಕೆ

ಮೂಡಬಿದಿರೆ ಕ್ಷೇತ್ರದ SDPI ಅಭ್ಯರ್ಥಿ ಅಲ್ಫೋನ್ಸ್ ಫ್ರಾಂಕೋ ಏ.17 ರಂದು ನಾಮಪತ್ರ ಸಲ್ಲಿಕೆ

ಮೂಡಬಿದಿರೆ: ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಎಸ್.ಡಿ.ಪಿ.ಐ ಅಭ್ಯರ್ಥಿಯಾಗಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೊ ರವರು ಎಪ್ರಿಲ್ 17 ರಂದು ಸೋಮವಾರ ಮೂಡಬಿದಿರೆ ನಾಡ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಎಸ್.ಡಿ‌.ಪಿ‌.ಐ ಮೂಡಬಿದಿರೆ ವಿಧಾನಸಭಾ ಕ್ಷೇತ್ರ ಉಸ್ತುವಾರಿ ಆಸಿಫ್ ಕೋಟೆಬಾಗಿಲು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಎಪ್ರಿಲ್ 17 ರಂದು ಸೋಮವಾರ ಬೆಳಿಗ್ಗೆ 11 ಘಂಟೆಗೆ ಮೂಡಬಿದಿರೆ ಕ್ಷೇತ್ರ ಕಛೇರಿಯಿಂದ ನಾಡಕಛೇರಿವರೆಗೆ ಬೃಹತ್ ಕಾಲ್ನಡಿಗೆಯ ಮೂಲಕ ಚಲಿಸಿ ನಾಡಕಛೇರಿಯಲ್ಲಿ ಮೂಡಬಿದಿರೆ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಅವರು ತಿಳಿಸಿದರು‌.

ಅಲ್ಫೋನ್ಸ್ ಫ್ರಾಂಕೋರವರು ಪ್ರಸಕ್ತ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಯಾಗಿದ್ದು ಮಾತ್ರವಲ್ಲದೇ ಭಾರತ ಸೇವಾದಳದ ಶಿಕ್ಷಣ ಇಲಾಖೆಯ ಕೇಂದ್ರ ಸಮಿತಿ ಹಾಗು ಆರ್ಥಿಕ ಸಮಿತಿಯ ಸದಸ್ಯರಾಗಿದ್ದಾರೆ, ಮಾತ್ರವಲ್ಲದೆ ಶ್ರೀ ಕ್ಷೇತ್ರ ಧರ್ಮಸ್ಥಳ ಇಂಜಿನಿಯರಿಂಗ್ ಕಾಲೇಜಿನ ಸಲಹಾ ಸಮಿತಿಯ ಸದಸ್ಯರಾಗಿ ಸೇವೆ ಸಲಿಸುತ್ತಿದ್ದಾರೆ. ಕ್ರಿಯಾತ್ಮಕ ಸಹಕಾರಿ ಸಂಘದ ಮೌಲ್ಯಾಧಾರಿತ ಉಪಾಧ್ಯಕ್ಷರಾಗಿ ನಿರ್ದೇಶಕರಾಗಿ ಸುದೀರ್ಘ 17 ವರ್ಷಗಳ ಸೇವೆಗೈದಿರುತ್ತಾರೆ. ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ (ರಿ) ಇದರ ಮೂರು ವಲಯಗಳ ಅಧ್ಯಕ್ಷರಾಗಿ ಜನಾನುರಾಗಿ ಸೇವೆ ಸಲ್ಲಿಸಿದ್ದಾರೆ. 

ಮಾನ್ಯ ಅಲ್ಫನ್ಸೋ ಫ್ರಾಂಕೋ ರವರು ಸಮಾಜ ಗುರುತಿಸಿದ ಮಾದರಿ ಶಿಕ್ಷಕರಾಗಿ, ಶಿಕ್ಷಕರ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಅಲ್ಲದೇ  ಒರ್ವ ಉತ್ತಮ ಕಲಾವಿದ ಮಾತ್ರವಲ್ಲದೆ ಜಿಲ್ಲಾ ಸರಕಾರಿ ಹಾಗು ಖಾಸಗಿ ಮಟ್ಟದ ಉತ್ತಮ ಕಾರ್ಯಕ್ರಮ ನಿರೂಪಕ,ತರಬೇತುದಾರರು ಕೂಡ ಆಗಿದ್ದಾರೆ. ಅಷ್ಟೇ ರಾಜ್ಯ ಕಂಡ ಅತ್ಯುತ್ತಮ ಭಾಷಣಗಾರ, ಸಾಂಸ್ಕೃತಿಕ ರಂಗದಲ್ಲಿ ಗುರುತಿಸಿರುವ ಇವರು ಸರಕಾರದ ಅನುದಾನದಡಿ ನವದೆಹಲಿಯಲ್ಲಿ ನಡೆದ ವಿಶೇಷ ತರಬೇತಿಯಲ್ಲಿ ತರಬೇತಿ ಪಡೆದ ಕರ್ನಾಟಕದ ಕೆಲವೇ ಕೆಲವರಲ್ಲಿ ಇವರು ಒಬ್ಬರು. 

ಯೋಗ ಶಿಕ್ಷಕಕರಾಗಿ ಮಾತ್ರವಲ್ಲದೆ ಲಯನ್ಸ್, IJC ಹಾಗು ಹಲವಾರು ಯುವಕ ಸಂಘಗಳಲ್ಲಿ ಸಕ್ರಿಯವಾಗಿ ಗುರುತಿಸಿ ಅಪಾರ ಅನುಭವ ಇರುವ ಇವರು ಸಮಾಜ ಸೇವೆಯಲ್ಲಿ ಎತ್ತಿದ ಕೈ ಇಂತಹ ಅಲ್ಫೋನ್ಸ್ ಫ್ರಾಂಕೊರವರು  ಮೂಡುಬಿದಿರೆ ವಿಧಾನಸಭಾ ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿಯಾಗಿದ್ದಾರೆ. ಇವರು ಗೆದ್ದು ಬಂದರೆ ಹಿಂದೆಂದೂ ಕಾಣದ ಅಭಿವೃದ್ದಿ ಮೂಡಬಿದರೆ ಕ್ಷೇತ್ರದಲ್ಲಿ ಕಾಣಬಹುದು. ಆದ್ದರಿಂದ ಕ್ಷೇತ್ರದ ಮತದಾರರು ಇವರನ್ನು ಬೆಂಬಲಿಸಿ ಮತ ನೀಡಬೇಕೆಂದು ಆಸಿಫ್ ಕೋಟೆಬಾಗಿಲು ಆಗ್ರಹಿಸಿದರು. 

ಮಾತ್ರವಲ್ಲದೇ ನಾಮಪತ್ರ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಮನವಿ ಮಾಡಿದರು.

Join Whatsapp
Exit mobile version