ಹೊಸದಿಲ್ಲಿ: ಮಾಜಿ ರಕ್ಷಣಾ ಸಚಿವ ಹಾಗೂ ಕೇರಳದ ಮಾಜಿ ಮುಖ್ಯಮಂತ್ರಿ ಎ.ಕೆ.ಆಂಟನಿ ಅವರನ್ನು ಕಾಂಗ್ರೆಸ್ ಶಿಸ್ತು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
AICC ಐವರು ಸದಸ್ಯರ ಸಮಿತಿಯನ್ನು ಪ್ರಕಟಿಸಿದ್ದು, ಅಂಬಿಕಾ ಸೋನಿ, ತಾರಿಖ್ ಅನ್ವರ್, ಜಿ. ಪರಮೇಶ್ವರ್ ಮತ್ತು ಜೈ ಪ್ರಕಾಶ್ ಅಗರ್ವಾಲ್ ಸಮಿತಿಯ ಇತರ ಸದಸ್ಯರಾಗಿದ್ದಾರೆ.
“ಕಾಂಗ್ರೆಸ್ ಅಧ್ಯಕ್ಷರು AICCಯ ಶಿಸ್ತು ಸಮಿತಿಯನ್ನು ತಕ್ಷಣ ದಿಂದ ಜಾರಿಗೆ ಬರುವಂತೆ ಪುನರ್ರಚಿಸಿದ್ದಾರೆ. ಎ.ಕೆ. ಆ್ಯಂಟನಿ ಈ ಸಮಿತಿಯ ಅಧ್ಯಕ್ಷರಾಗಿದ್ದು, ತಾರೀಖ್ ಅನ್ವರ್ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ” ಎಂದು ಪ್ರಕಟಣೆ ತಿಳಿಸಿದೆ.