Home ಟಾಪ್ ಸುದ್ದಿಗಳು ಹತ್ರಾಸ್ ಪ್ರಕರಣ: ಅತೀಕುರ್ರಹ್ಮಾನ್ ಶಸ್ತ್ರಚಿಕಿತ್ಸೆಗೆ 2 ಲಕ್ಷ ರೂ. ಬೇಡಿಕೆ ಇಟ್ಟ ಏಮ್ಸ್

ಹತ್ರಾಸ್ ಪ್ರಕರಣ: ಅತೀಕುರ್ರಹ್ಮಾನ್ ಶಸ್ತ್ರಚಿಕಿತ್ಸೆಗೆ 2 ಲಕ್ಷ ರೂ. ಬೇಡಿಕೆ ಇಟ್ಟ ಏಮ್ಸ್

ಲಕ್ನೋ: ಹತ್ರಾಶ್ ಯುಎಪಿಎ ಪ್ರಕರಣದ ಆರೋಪಿ ಅತೀಕುರ್ರಹ್ಮಾನ್ ಅವರ ಆರೋಗ್ಯ ತೀರ ಹದಗೆಟ್ಟಿದ್ದರೂ, ಅವರನ್ನು ಮಥುರಾ ಜಿಲ್ಲಾ ಕಾರಾಗೃಹದಿಂದ ಪ್ರಕರಣದ ವಿಚಾರಣೆಗಾಗಿ ಲಕ್ನೋ ವಿಶೇಷ ನ್ಯಾಯಾಲಯಕ್ಕೆ ಕರೆದೊಯ್ಯಲಾಗಿದೆ.

ನ್ಯಾಯಾಲಯಕ್ಕೆ ಹಾಜರು ಪಡಿಸುವ ಮೊದಲು ರಹ್ಮಾನ್ ಅವರ ಆರೋಗ್ಯ ತೀವ್ರ ಹದಗೆಟ್ಟ ನಿಟ್ಟಿನಲ್ಲಿ ಬೆಂಗಾವಲು ಪೊಲೀಸರು ಮತ್ತು ಅಧಿಕಾರಿಗಳು ಚಂಡೋಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಆಗ್ರಾ ಆಸ್ಪತ್ರೆ ಮತ್ತು ನಂತರ SNMC ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ರಹ್ಮಾನ್ ಅವರಿಗೆ ದೆಹಲಿಯ ನ್ಯಾಯಾಲಯದ ಆದೇಶದ ಮೇರೆಗೆ ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಮಧ್ಯೆ ಅವರ ಶಸ್ತ್ರ ಚಿಕಿತ್ಸೆಗೆ ಎರಡು ಲಕ್ಷ ನಗದು ಮತ್ತು 10 ಯೂನಿಟ್ ರಕ್ತದ ವೆಚ್ಚವನ್ನು ಪೊಲೀಸ್ ಮಹಾನಿರ್ದೇಶಕರು/ ಐಜಿ , ಜೈಲು ಪ್ರಾಧಿಕಾರದಿಂದ ಪಡೆದ ನಂತರ ರಹ್ಮಾನ್ ಅವರನ್ನು ದೆಹಲಿ ಏಮ್ಸ್ ಗೆ ಸ್ಥಳಾಂತರಿಸಲಾಗುವುದೆಂದು ಜೈಲು ಅಧೀಕ್ಷಕರು ತಿಳಿಸಿದ್ದಾರೆ.

ಆರೋಪಿ ಪರ ವಕೀಲರಾದ ಫುರ್ಖಾನ್ ಪಠಾಣ್ ಮತ್ತು ಆಬಿದ್ ಅವರು ಅತೀಕುರ್ರಹ್ಮಾನ್ ಅವರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಜೈಲು ಅಧಿಕಾರಿಗಳಿಗೆ ಸೂಚಿಸುವಂತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು.

Join Whatsapp
Exit mobile version