Home ಟಾಪ್ ಸುದ್ದಿಗಳು AIBA ಚಾಂಪಿಯನ್ಸ್ ಮತ್ತು ವೆಟರನ್ಸ್ ಕಮಿಟಿಯ ಅಧ್ಯಕ್ಷರಾಗಿ ಮೇರಿ ಕೋಮ್ ನೇಮಕ

AIBA ಚಾಂಪಿಯನ್ಸ್ ಮತ್ತು ವೆಟರನ್ಸ್ ಕಮಿಟಿಯ ಅಧ್ಯಕ್ಷರಾಗಿ ಮೇರಿ ಕೋಮ್ ನೇಮಕ

ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಅವರನ್ನು ಅಂತರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಶನ್ (AIBA)ಚಾಂಪಿಯನ್ಸ್ ಮತ್ತು ವೆಟರನ್ಸ್ ಕಮಿಟಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

“ಎಐಬಿಎ ನಿರ್ದೇಶಕರ ಮಂಡಳಿಯ ಮತದಾನದ ನಂತರ ಎಐಬಿಎ ಚಾಂಪಿಯನ್ಸ್ ಮತ್ತು ವೆಟರನ್ ಕಮಿಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಮೇರಿ ಕೋಮ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಲು ನಾನು ಬಹಳ ಸಂತೋಷಪಡುತ್ತೇನೆ ” ಎಂದು ಎಐಬಿಎ ಅಧ್ಯಕ್ಷ ಉಮರ್ ಕ್ರೆಮ್ಲೆವ್ ತಿಳಿಸಿದರು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ರಚಿಸಲಾದ ನಿರ್ದೇಶಕ ಮಂಡಳಿಯು ವಿಶ್ವಾದ್ಯಂತದ ಅತ್ಯಂತ ಗೌರವಾನ್ವಿತ ಬಾಕ್ಸಿಂಗ್ ಅನುಭವಿಗಳು ಮತ್ತು ಚಾಂಪಿಯನ್‌ಗಳನ್ನು ಒಳಗೊಂಡಿದೆ. ಅಲ್ಲಿ ಆಯ್ಕೆ ಪ್ರಕ್ರಿಯೆಯು ನಡೆದಿದ್ದು ಮೇರಿ ಕೋಮ್ ರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಅಧ್ಯಕ್ಷ ನೇಮಕಾತಿಗೆ ಧನ್ಯವಾದ ಸಲ್ಲಿಸಿದ ಮೇರಿ ಕೋಮ್ “ನನ್ನ ನಿಯೋಜಿತ ಹುದ್ದೆಯಲ್ಲಿ ಅತ್ಯುತ್ತಮವಾದದ್ದನ್ನು ನಾನು ನೀಡುತ್ತೇನೆ” ಎಂದು ಹೇಳಿದ್ದಾರೆ.

Join Whatsapp
Exit mobile version