►ಕಾಯ್ದೆ ಜಾರಿಗೆ ಮುಂದಾದ ಕೇಂದ್ರಕ್ಕೆ ಮತ್ತೆ ಹಿನ್ನಡೆ
ಹೊಸದಿಲ್ಲಿ: NDA ಸಮನ್ವಯ ಸಮಿತಿ ಸಭೆಯಲ್ಲಿ ಮಿತ್ರ ಪಕ್ಷ ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP) ಸಿಎಎ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಲು ಆಗ್ರಹಿಸಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ NPP ನಾಯಕ ಅಗಥಾ ಸಂಗ್ಮಾ, ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆದ ಮಾದರಿಯಲ್ಲೇ ಸಿಎಎ ಕಾಯ್ದೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದೇವೆ. ಸರ್ಕಾರ ಇನ್ನೂ ಸಿಎಎ ನಿಯಮಗಳನ್ನು ನೊಟೀಫೈ ಮಾಡಿಲ್ಲ. ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಇದು ಹೆಚ್ಚು ಸೂಕ್ಷ್ಮವಾದ ವಿಷಯವಾಗಿದೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿಎಎ ಜಾರಿಗೆ ತರಲು ಮುಂದಾಗಿರುವ ಬಿಜೆಪಿಗೆ ಮಿತ್ರ ಪಕ್ಷದಿಂದ ದೊಡ್ಡ ತಲೆನೋವು ಎದುರಾಗಿದೆ.
ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಘೋಷಣೆ ಮಾಡಿದ ಬಳಿಕ ವಿಪಕ್ಷಗಳು ಇದೇ ಮಾದರಿಯಲ್ಲಿ ಸಿಎಎಯನ್ನೂ ಹಿಂಪಡೆಯಬೇಕೆಂದು ಆಗ್ರಹಿಸುತ್ತಿವೆ.