ಬೆಂಗಳೂರು: ಸುಂಕದಕಟ್ಟೆಯ ಬಳಿ ಕಳೆದ ತಿಂಗಳು ಹಾಡಹಗಲೇ ಆ್ಯಸಿಡ್ ದಾಳಿಗೊಳಗಾದ ಯುವತಿಯ ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡುಬಂದಿದೆ.
ಕಳೆದ ಏಪ್ರಿಲ್ 28 ರಂದು ಸುಂಕದಕಟ್ಟೆಯಲ್ಲಿ ಆ್ಯಸಿಡ್ ದಾಳಿಗೆ ಒಳಗಾಗಿ ಸೆಂಟ್ ಜಾನ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು ಭಯ ಪಡುವ ಆತಂಕ ದೂರವಾಗಿದೆ.
ಯುವತಿಯನ್ನು ಆಸ್ಪತ್ರೆಯ ಬರ್ನಿಂಗ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಅಲ್ಲಿ ಬರೋಬ್ಬರಿ 16 ದಿನಗಳ ನಿರಂತರ ಹೋರಾಟದಲ್ಲಿ ಯುವತಿ ಗೆದ್ದು ಬಂದಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ ನಡುವೆ, ಪ್ರತೀ ಕ್ಷಣವೂ ಏನೋ ಅನ್ನೋ ಆತಂಕ ಇದೀಗ ಇಲ್ಲ. ಬರ್ನಿಂಗ್ ಸ್ಪೆಷಲ್ ವಾರ್ಡ್ ನಲ್ಲಿ ಯುವತಿ ಆರೈಕೆಯಲ್ಲಿದ್ದಾರೆ.
ಯುವತಿ ಸ್ವಲ್ಪ ಸ್ವಲ್ಪವೇ ಅನ್ನವನ್ನು ಸೇವಿಸಲು ಆರಂಭಿಸಿ ಶುರುದ್ದಾರೆ. ಒಣ ಹಣ್ಣುಗಳನ್ನು ಪುಡಿ ಮಾಡಿ, ಸರಿ ಜೊತೆ ಬೆರೆಸಿ ಕೊಡಲು ಪೋಷಕರಿಗೆ ವೈದ್ಯರು ಸಲಹೆ ನೀಡಿದ್ದಾರೆ.
ಮುಖದ ಮುಂಭಾಗ ಮಾತ್ರ ಆಸಿಡ್ ನಿಂದ ಸುಟ್ಟಿಲ್ಲ, ಮುಖದ ಎಡ ಮತ್ತು ಬಲಭಾಗ ಸುಟ್ಟಿದ್ದು, ಕಿವಿಗೆ ಹಾನಿಯಾಗಿದೆ. ಇನ್ನೂ ಶೇ 10% ನಷ್ಟು ಚರ್ಮ ಬದಲಾಣೆಯ (ಸ್ಕಿನ್ ಟ್ರ್ಯಾನ್ಸ್ ಪ್ಲಾಂಟೇಷನ್) ಸರ್ಜರಿ ನಡೆಸಬೇಕಿದ್ದು ಯುವತಿಯು ಕುಟುಂಬಸ್ಥರ ಜೊತೆಗೆ ಮಾತನಾಡುತ್ತಿದ್ದಾರೆ.
ನಾಗೇಶ್ ಗೆ ತೀವ್ರ ಶೋಧ:
ಈ ನಡುವೆ ತಿರುಪತಿ, ಸೇಲಂ ಮತ್ತು ಧರ್ಮಸ್ಥಳದ ಲಾಡ್ಜ್ ಗಳಲ್ಲಿ ಆರೋಪಿ ನಾಗೇಶ್ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಆರೋಪಿಯನ್ನು ನೋಡಿದ ಬಗ್ಗೆ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಯೋಧ ಎಂದು ಹೇಳಿಕೊಳ್ಳುವ ವ್ಯಕ್ತಿಯಿಂದ ಕರೆ ಬಂದ ನಂತರ ತಂಡವೊಂದು ಡೆಹ್ರಾಡೂನ್ ಗೆ ತೆರಳಿದೆ. ಈ ಮಧ್ಯೆ ಪೊಲೀಸ್ ಗೆ ಸುಳಿವು ಬರದಂತೆ ಇರಲು ನಾಗೇಶ್ ತನ್ನ ಎಟಿಎಂ ಕಾರ್ಡ್ ಅನ್ನು ಸಹ ಬಳಸಿಲ್ಲ ಅಥವಾ ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸಿಲ್ಲ ಇದರಿಂದಾಗಿ ಆತ ಪರಾರಿಯಾಗಿ ಮೂರು ವಾರ ಕಳೆದರೂ ಸುಳಿವು ಪತ್ತೆಯಾಗಿಲ್ಲ.