Home ಟಾಪ್ ಸುದ್ದಿಗಳು ಫೆಲೆಸ್ತೀನ್ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದವರ ವಿರುದ್ಧ FIR: ರಾಜ್ಯ ಸರಕಾರದ ಎಡ್ಜೆಸ್ಟ್ ಮೆಂಟ್...

ಫೆಲೆಸ್ತೀನ್ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದವರ ವಿರುದ್ಧ FIR: ರಾಜ್ಯ ಸರಕಾರದ ಎಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್; SDPI

ಮಂಗಳೂರು: ಫೆಲೆಸ್ತೀನ್ ಹಾಗೂ ಲೆಬನಾನ್ ನ ಜನವಸತಿ ಕೇಂದ್ರದ ಮೇಲೆ ಇಸ್ರೇಲ್‌ ನ ಝಿಯೋನಿಸ್ಟ್ ಸರ್ಕಾರ ಮಿಸೈಲ್ ದಾಳಿ ನಡೆಸಿ ಮಕ್ಕಳು, ಮಹಿಳೆಯರು ಹಾಗೂ ಅಮಾಯಕ ನಾಗರಿಕರನ್ನು ವಂಶಹತ್ಯೆ ನಡೆಸುತ್ತಿರುವ ಕ್ರಮವನ್ನು ಖಂಡಿಸಿ ಮಂಗಳೂರಿನಲ್ಲಿ  ಸಾಂಕೇತಿಕ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ಮೇಲೆ  FIR ದಾಖಲಿಸಿದ ರಾಜ್ಯ ಸರ್ಕಾರ ಹಾಗೂ ಮಂಗಳೂರು  ಪೋಲೀಸರ ನಡೆಯ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಇಸ್ರೇಲ್ ಫೆಲೆಸ್ತೀನ್ ಹಾಗೂ ಲೆಬನಾನ್ ನಲ್ಲಿ ನಡೆಸುತ್ತಿರುವುದು ಯುದ್ಧವಲ್ಲ ಬದಲಿಗೆ ವಂಶಹತ್ಯೆಯಾಗಿದೆ.ವಿಶ್ವಸಂಸ್ಥೆ, ಭಾರತ ಸೇರಿದಂತೆ ಜಗತ್ತಿನ ಅತ್ಯಧಿಕ ರಾಷ್ಟ್ರಗಳು ಅಮಾಯಕರ ನರಮೇಧ ನಿಲ್ಲಿಸುವಂತೆ ಒತ್ತಾಯಪಡಿಸುತ್ತಿದೆ.

ಭಾರತ ಸರ್ಕಾರ ಫೆಲೆಸ್ತೀನ್ ಗೆ ಆಹಾರ ಉತ್ಪನ್ನಗಳನ್ನು ಕಳಿಸಿಕೊಟ್ಟಿದೆ,ಕಾಂಗ್ರೆಸ್ ನಾಯಕರು ಫೆಲೆಸ್ತೀನ್ ಪರವಾಗಿ ಧ್ವನಿ ಎತ್ತಿದ್ದಾರೆ.ಆದರೆ ವಿಪರ್ಯಾಸವೆಂದರೆ ಫೆಲೆಸ್ತೀನ್ ನಾಗರಿಕರ  ನರಮೇಧ ನಿಲ್ಲಿಸುವಂತೆ ಒತ್ತಾಯಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ಮೇಲೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ  ಸರ್ಕಾರದ ಅಧೀನದಲ್ಲಿರುವ ಪೋಲಿಸ್ ಇಲಾಖೆ FIR ದಾಖಲಿಸಿದೆ ಎಂದರೆ ಕರ್ನಾಟಕ ಸರ್ಕಾರ ಹಾಗೂ ಪೋಲಿಸ್ ಇಲಾಖೆ ವಂಶಹತ್ಯೆಯ ಪರವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಫೆಲೆಸ್ತೀನ್ ವಿಚಾರದಲ್ಲಿ ಶಾಂತಿಯ ಪ್ರತಿಪಾದನೆ ಮಾಡಿದೆಲ್ಲವೂ ಜನರ ಕಣ್ಣೊರೆಸುವ  ಡಬ್ಬಲ್ ಗೇಮ್ ತಂತ್ರವೇ ಅಥವಾ ಸಂಘಪರಿವಾರವನ್ನು ಸಂತೃಪ್ತಿ ಪಡಿಸುವ ಎಜೆಸ್ಟ್ ಮೆಂಟ್ ರಾಜಕೀಯವೇ  ಎಂದು ಅನ್ವರ್ ಸಾದತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನುಮತಿ ರಹಿತವಾಗಿ ಪ್ರತಿಭಟನೆ ನಡೆಸಿದ ಕಾರಣ FIR ದಾಖಲಿಸಲಾಗಿದೆ ಎಂದು ಹೇಳುವ ಪೋಲಿಸ್ ಇಲಾಖೆ, ಪ್ರತಿಭಟನೆಯ ನೇತ್ರತ್ವ ವಹಿಸಿದ ನಾಯಕರು ಒಂದು ವಾರದ ಹಿಂದೆಯೇ ಅನುಮತಿ ಕೇಳಿದ್ದರೂ  ಯಾಕಾಗಿ ಅನುಮತಿ ನೀಡಿಲ್ಲ?

ಸಂಘಪರಿವಾರ ಹಾಗೂ ಅದರ  ಅಂಗಸಂಸ್ಥೆಗಳು ಜಾತ್ಯಾತೀತ ರಾಷ್ಟ್ರವಾದ ಭಾರತದಲ್ಲಿ

ಹಿಂದು ರಾಷ್ಟ್ರ ಎಂಬ ದೇಶದ್ರೋಹಿ,

ಸಂವಿಧಾನ ವಿರೋಧಿ ಕಾರ್ಯಕ್ರಮವನ್ನು ಅನುಮತಿ ರಹಿತವಾಗಿ  ದ.ಕ ಜಿಲ್ಲೆಯಲ್ಲಿ ನಡೆಸಲು ಅದು ಕೂಡ ಜಾತ್ಯಾತೀತ ಲೇಬಲ್ ನ ಕಾಂಗ್ರೆಸ್ ಸರ್ಕಾರ ಇರುವಾಗಲೇ ಅವಕಾಶ ನೀಡಿ  ಅದಕ್ಕೆ ಭದ್ರತೆ ಒದಗಿಸುವ ಪೋಲೀಸರು ವಂಶಹತ್ಯೆಯ ವಿರುದ್ಧ ನಡೆಯುವ ಪ್ರತಿಭಟನೆಗೆ ಯಾಕಾಗಿ ಅನುಮತಿ ನೀಡುವುದಿಲ್ಲ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸಲು ಯಾವ ರೀತಿಯ ಅನುಮತಿ ಬೇಕು ??

ಪೋಲಿಸ್ ಇಲಾಖೆ ಯಾರ ಆದೇಶವನ್ನು ಪಾಲನೆ ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಪೋಲಿಸ್ ಇಲಾಖೆ ಹಾಗೂ ಸರ್ಕಾರ ಪ್ರತಿಭಟನಾಕಾರರ ಮೇಲೆ FIR ನ್ನು ಕೂಡಲೇ ಕಾನೂನು ಪ್ರಕಾರ ಹಿಂಪಡೆಯಬೇಕು ಹಾಗೂ ಅಮಾಯಕ ಫೆಲೆಸ್ತೀನ್ ಪರ ಹೋರಾಟಗಾರರಿಗೆ ದೌರ್ಜನ್ಯ ನಡೆಸದೆ ಸಂವಿಧಾನ ಬದ್ದ ಪ್ರತಿಭಟನೆಗಳಿಗೆ ಅನುಮತಿ ನಿರಾಕರಣೆ ಮಾಡಬಾರದೆಂದು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ

Join Whatsapp
Exit mobile version