Home ಟಾಪ್ ಸುದ್ದಿಗಳು ಆದಿತ್ಯಾ ಎಲ್ 1 ರಾಕೆಟ್ ಯಶಸ್ವಿಯಾಗಿ ಉಡಾವಣೆ

ಆದಿತ್ಯಾ ಎಲ್ 1 ರಾಕೆಟ್ ಯಶಸ್ವಿಯಾಗಿ ಉಡಾವಣೆ

ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ ಇಸ್ರೋ

ಶ್ರೀಹರಿಕೋಟಾ: ಭಾರತದ ಮಹತ್ವಾಕಾಂಕ್ಷೆಯ ಸೂರ್ಯಯಾನ ಯೋಜನೆಯ ಅಡಿಯಲ್ಲಿ ಆದಿತ್ಯ ಎಲ್‌-1 (Aditya L1) ಬಾಹ್ಯಾಕಾಶ ನೌಕೆಯನ್ನು ಶನಿವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಆದಿತ್ಯ L1 ಹೊತ್ತ ಪಿಎಸ್‌ಎಲ್‌ವಿ ರಾಕೆಟ್​​ನ ಉಡಾವಣೆ ಯಶಸ್ವಿಯಾಗಿದೆ ಎಂದು ಭಾರಾತೀಯ ಬಾಹ್ಯಾಕಾಶ ವಿಜ್ಞಾನ ಸಂಶೋಧನಾ ಸಂಸ್ಥೆ ಇಸ್ರೋ ತಿಳಿಸಿದೆ.


ಚಂದ್ರನ ಮೇಲ್ಮೈಯನ್ನು ಅನ್ವೇಷಿಸಿದ ನಂತರ ಇಸ್ರೋ ತನ್ನ ಪ್ರಯಾಣವನ್ನು ಸೂರ್ಯನ ಕಡೆಗೆ ಬೆಳೆಸುತ್ತಿದೆ. ಇಂದು ಆಗಸಕ್ಕೆ ಹಾರಿದ Aditya L1 ಉಪಗ್ರಹ ಭಾಗಮಂಡಲದಲ್ಲಿ ಅಡಗಿರುವ ಹಲವು ರಹಸ್ಯಗಳನ್ನು ಬಿಚ್ಚಿಡಲಿದೆ ಎನ್ನುತ್ತಾರೆ ವಿಜ್ಞಾನಿಗಳು. ಇದು ಸೂರ್ಯನಿಂದ ಹೊರಹೊಮ್ಮುವ ವಿನಾಶಕಾರಿ ಸೌರ ಬಿರುಗಾಳಿಗಳು, ಪ್ಲಾಸ್ಮಾ ಮತ್ತು ಜ್ವಾಲೆಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ರೋಡೇಶಿಯಾದಲ್ಲಿ ಉಪಗ್ರಹಗಳು ಮತ್ತು ಬಾಹ್ಯಾಕಾಶ ನೌಕೆಗಳ ಪರಿಣಾಮಕಾರಿ ರಕ್ಷಣೆಯನ್ನು ಸಕ್ರಿಯಗೊಳಿಸುತ್ತದೆ ಎಂದು ಹೇಳಲಾಗುತ್ತದೆ.

Join Whatsapp
Exit mobile version