Home ಟಾಪ್ ಸುದ್ದಿಗಳು KSRTC ನಿಗಮಕ್ಕೆ ವಿಶೇಷ ಟ್ರಕ್‌ಗಳ ಸೇರ್ಪಡೆ: ಡಿಸೆಂಬರ್‌ನಲ್ಲಿ ಕಾರ್ಯಾಚರಣೆ

KSRTC ನಿಗಮಕ್ಕೆ ವಿಶೇಷ ಟ್ರಕ್‌ಗಳ ಸೇರ್ಪಡೆ: ಡಿಸೆಂಬರ್‌ನಲ್ಲಿ ಕಾರ್ಯಾಚರಣೆ

ಬೆಂಗಳೂರು: KSRTC ಸಂಸ್ಥೆ ಇದೇ ಮೊದಲ ಬಾರಿಗೆ ಪಾರ್ಸೆಲ್‌ಗಳಿಗಾಗಿ 20 ವಿಶೇಷ ಟ್ರಕ್‌ಗಳನ್ನು ಖರೀದಿಸಿದೆ. KSRTC ದಶಕಗಳ ಹಿಂದೆ ಟ್ರಕ್‌ಗಳ ಮೂಲಕ ಪಾರ್ಸೆಲ್ ಒಯ್ಯುವ ಚಿಂತನೆ ಮಾಡಿತ್ತು. ಇದನ್ನು ಈಗ ಕಾರ್ಯರೂಪಕ್ಕೆ ತರಲಾಗುತ್ತಿದೆ. ಡಿಸೆಂಬರ್ ತಿಂಗಳಿಂದ ಈ ಟ್ರಕ್‌ಗಳು ಕಾರ್ಯಾಚರಿಸಲಿದೆ.

ಪಾರ್ಸೆಲ್ ಕೊಂಡ್ಯೋಯ್ಯುವ ವ್ಯವಸ್ಥೆ ಸದ್ಯ ಕೆಎಸ್‌ಆರ್‌ಸಿ ಬಸ್‌ಗಳಲ್ಲಿ ಈಗಾಗಲೇ ಇದ್ದು, ಬಸ್‌ಗಳನ್ನೇ ಇದಕ್ಕೆ ಬಳಸಲಾಗುತ್ತಿತ್ತು. ಆರಂಭಿಕ ಹಂತದಲ್ಲಿ 100ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ಪಾರ್ಸೆಲ್ ಸೇವೆ ಆರಂಭಿಸಿದ್ದ ಸಂಸ್ಥೆ ನಂತರ ಅವುಗಳನ್ನು ತನ್ನೆಲ್ಲ ಬಸ್‌ ನಿಲ್ದಾಣಗಳಿಗೆ ವಿಸ್ತರಿಸಿದೆ. ಬಸ್ ಡಿಕ್ಕಿಗಳಲ್ಲಿ ಪಾರ್ಸೆಲ್ ಒಯ್ಯುವ ಸೇವೆಯಿಂದ ವಾರ್ಷಿಕವಾಗಿ ಸುಮಾರು 04 ಕೋಟಿ ಆದಾಯ ಸಂಸ್ಥೆ ಗಳಿಸುತ್ತಿದೆ. 800 ಬಸ್‌ಗಳಲ್ಲಿ ಪಾರ್ಸೆಲ್ ಸೇವೆ ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು 4000 ಬಸ್‌ಗೆ ವಿಸ್ತರಣೆ ಮಾಡುವ ಗುರಿ ಇಟ್ಟುಕೊಂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ 20 ಟ್ರಕ್‌ಗಳನ್ನು ಪಾರ್ಸೆಲ್‌ ಸೇವೆಗೆ ಡಿಸೆಂಬರ್ 15ರಂದು ನಿಯೋಜಿಸಲಿದೆ. ಎಲ್ಲವು ಅಂದುಕೊಂಡಂತಾಗಿ ಉತ್ತಮ ಸ್ಪಂದನೆ ವ್ಯಕ್ತವಾದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಲಾರಿಗಳನ್ನು ಖರೀದಿಸಲಾಗುವುದು ಎಂದು ನಿಗಮದ ವ್ಯವಸ್ಥಾಪಕ ಅನ್ಬುಕುಮಾರ್ ತಿಳಿಸಿದ್ದಾರೆ.

Join Whatsapp
Exit mobile version