ನವದೆಹಲಿ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ 7 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ.
ಉದ್ಯಮಿಯೊಬ್ಬರ ಪತ್ನಿಗೆ 200 ಕೋಟಿ ರೂಪಾಯಿ ವಂಚಿಸಿರುವ ಆರೋಪದಡಿ ಸುಕೇಶ್ ಚಂದ್ರಶೇಖರ್ ನನ್ನು ಇಡಿ ಅಧಿಕಾರಿಗಳು ಬಂಧಿಸಿದಾಗ ನಟಿ ಜಾಕ್ವೆಲಿನ್ ಹಾಗೂ ಸುಕೇಶ್ ಚಂದ್ರಶೇಖರ್ ನಡುವಿನ ಸಂಬಂಧ ಬಯಲಾಗಿತ್ತು.
ವಿಚಾರಣೆ ವೇಳೆ ಸುಕೇಶ್ ನಟಿ ಜಾಕ್ವೆಲಿನ್ ಗೆ ಐಷಾರಾಮಿ ವಸ್ತುಗಳನ್ನು ಉಡುಗೊರೆಯಾಗಿ ನೀಡಿರುವುದಾಗಿ ಹೇಳಿಕೊಂಡಿದ್ದನು. ಇದೇ ಪ್ರಕರಣಕ್ಕೆ ಸಂಬಂಧಿಸಿ ಜಾಕ್ವೆಲಿನ್ ಸೇರಿದ 7 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.