Home ಟಾಪ್ ಸುದ್ದಿಗಳು ನಟಿ ಭೈರವಿ ವೈದ್ಯ ನಿಧನ

ನಟಿ ಭೈರವಿ ವೈದ್ಯ ನಿಧನ

ನವದೆಹಲಿ: ನಟಿ ಭೈರವಿ ವೈದ್ಯ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.


ಕಳೆದ ಆರು ತಿಂಗಳಿನಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಹಿರಿಯ ನಟಿ 45 ವರ್ಷಗಳಿಗೂ ಹೆಚ್ಚು ಕಾಲದಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು, ಹಲವು ಸಿನಿಮಾ ಮತ್ತು ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.


ನಟಿ ಭೈರವಿ ವೈದ್ಯ ಅವರು ಐಶ್ವರ್ಯಾ ರೈ ಅಭಿನಯದ ತಾಲ್ ಮತ್ತು ಸಲ್ಮಾನ್ ಖಾನ್ – ರಾಣಿ ಮುಖರ್ಜಿ ಜೋಡಿಯ ಚೋರಿ ಚೋರಿ ಚುಪ್ಕೆ ಚುಪ್ಕೆ ಚಿತ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಪುತ್ರಿ ಜಾನಕಿ ವೈದ್ಯ ಅವರು ತಾಯಿಯ ನಿಧನದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

Join Whatsapp
Exit mobile version