Home ಟಾಪ್ ಸುದ್ದಿಗಳು ನೇಪಾಳಿ ಉಡುಪು ಧರಿಸಿ ಪ್ರಧಾನಿಯನ್ನು ಅಣಕಿಸಿದ ನಟ ಪ್ರಕಾಶ್ ರಾಜ್

ನೇಪಾಳಿ ಉಡುಪು ಧರಿಸಿ ಪ್ರಧಾನಿಯನ್ನು ಅಣಕಿಸಿದ ನಟ ಪ್ರಕಾಶ್ ರಾಜ್

ಬೆಂಗಳೂರು: ಬಹುಭಾಷಾ ನಟ, ನಿರ್ದೇಶಕ ನಿರ್ಮಾಪಕ ಹಾಗೂ ರಾಜಕಾರಣಿ  ಪ್ರಕಾಶ್ ರಾಜ್ ಅವರು ಹೊಸ ವೇಷ ಧರಿಸಿರುವ ಫೋಟೋವನ್ನು ಟ್ವೀಟ್ ಮಾಡಿ ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ  ನೇಪಾಳದ ಸಾಂಪ್ರದಾಯಿಕ ಉಡುಪನ್ನು ಧರಿಸಿರುವ ಎರಡು ಫೋಟೋಗಳನ್ನು ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, ಒಂದು ಫೋಟೋದಲ್ಲಿ ರಾಜಕಾರಣಿಗಳ ಶೈಲಿಯಲ್ಲಿ ಕೈಬೀಸುತ್ತಿರುವುದನ್ನು ಕಾಣಬಹುದಾಗಿದೆ.

ಫೋಟೋ ಜೊತೆ ‘ನಮ್ಮ ಸುಪ್ರೀಂ ಲೀಡರ್ ನಿಂದ ಸ್ಫೂರ್ತಿಗೊಂಡು ಇದನ್ನು ಧರಿಸಿದ್ದೇನೆ. ಹಾಯ್ ಗಯ್ಸ್ ನೀವೇಕೆ ಒಮ್ಮೆ ಇದನ್ನು ಪ್ರಯತ್ನಿಸಬಾರದು ” ಎಂದು ಬರೆದುಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರು ಇತ್ತೀಚೆಗಷ್ಟೇ ನೇಪಾಳಕ್ಕೆ ಭೇಟಿ ನೀಡಿದ್ದು, ಈ ವಿಚಾರವನ್ನು ಅಣಕಿಸುವ ಸಲುವಾಗಿ ಹೀಗೆ ಟ್ವೀಟ್ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಕಾಶ್ ರಾಜ್ ಮಾಡಿರುವ ಟ್ವೀಟ್ ಚರ್ಚೆಗೆ ಗ್ರಾಸವಾಗಿದ್ದು, ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

Join Whatsapp
Exit mobile version