Home ಕ್ರೀಡೆ ಆತೂರಿನ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅವಳಿ ಸಹೋದರರ ಸಾಧನೆ

ಆತೂರಿನ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅವಳಿ ಸಹೋದರರ ಸಾಧನೆ

ಉಪ್ಪಿನಂಗಡಿ: ಅಕ್ಟೋಬರ್ ತಿಂಗಳ 26 ಮತ್ತು 27 ರಂದು ಪುತ್ತೂರು ತಾಲೂಕು ಮಟ್ಟದ ಅಥ್ಲೆಟಿಕ್ಸ್‌ ಕ್ರೀಡಾಕೂಟವು ಸರಕಾರಿ ಪ್ರೌಢಶಾಲೆ ಹಿರೆಬಂಡಾಡಿಯ ನೂತನವಾಗಿ ನಿರ್ಮಾಣವಾದ ಮೈದಾನದಲ್ಲಿ ನೆರವೇರಿತು. ಈ ಕ್ರೀಡಾಕೂಟದಲ್ಲಿ 14 ರ ವಯೋಮಿತಿಯ ಬಾಲಕರ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಆತೂರಿನ ಬದ್ರಿಯಾ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಹಸನ್ ಮುಬೀನ್ ಮತ್ತು ಹುಸೈನ್ ಮುಫ಼ೀದ್ ಪ್ರಥಮ ಹಾಗು ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಇವರಿಬ್ಬರು ಸಹೋದರರು.

ಹಸನ್ ಮುಬೀನ್ 1.45 m ನಷ್ಟು ಹಾರುವುದರೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ರಿಡಾಕೂಟದಲ್ಲಿ ಕಡಬ ತಾಲೂಕನ್ನು ಪ್ರತಿನಿಧಿಸಲಿದ್ದಾರೆ.

ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರೀಡಾ ಕ್ಷೇತ್ರಕ್ಕೆ ವಿಶೇಷ ಪ್ರೋತ್ಸಾಹ ನೀಡುತಿದ್ದು, 2023-24 ರ ಸಾಲಿನ ತಾಲೂಕು ಮಟ್ಟದ ಫ಼ುಟ್ಬಾಲ್ ಪಂದ್ಯಾವಳಿಯಲ್ಲಿ ಬಾಲಕರ ತಂಡ ದ್ವಿತೀಯ ಸ್ಥಾನ, ಕಡಬ ವಲಯದ ತ್ರೋಬಾಲ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಮಾತ್ರವಲ್ಲದೆ, ಕಡಬ ವಲಯದ ಅಥ್ಲೆಟಿಕ್ಸ್ ನಲ್ಲಿ ಹಲವು ವಿದ್ಯಾರ್ಥಿಗಳು ಚಿನ್ನ,ಬೆಳ್ಳಿ,ಕಂಚಿನ ಪದಕವಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕಿ ದಿವ್ಯಾ ಮತ್ತು ಸಹ ಶಿಕ್ಷಕ ಅಲ್ತಾಫ಼್ ಮಾರ್ಗದರ್ಶನವನ್ನು ನೀಡಿರುತ್ತಾರೆ.

ಕ್ರೀಡಾಕೂಟದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಆದಂ ಹಾಜಿ, ಪ್ರಾಂಶುಪಾಲ ಮಲ್ಲಿಕಾ ಮತ್ತು ಶಿಕ್ಷಕರು ಮತ್ತು ಹಿತೈಶಿಗಳು ಅಭಿನಂದಿಸಿದ್ದಾರೆ.

Join Whatsapp
Exit mobile version