ಪುತ್ತೂರು : ಕಲ್ಲೇರಿ-ಕುಪ್ಪೆಟ್ಟಿ ರಸ್ತೆಯ ಹುಣಸೆಕಟ್ಟೆ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೃತಪಟ್ಟವರನ್ನು ಉರುವಾಲು ಗ್ರಾಮದ ಕೃಷ್ಣ ಶೆಟ್ಟಿ (38) ಮತ್ತು ಕಣಿಯೂರು ಗ್ರಾಮದ ನೀರಲ್ಕೆ ನಿವಾಸಿ ಜಯಾನಂದ ಗೌಡ (27) ಎಂದು ಗುರುತಿಸಲಾಗಿದೆ.
ಕನ್ಸ್ಟ್ರಕ್ಷನ್ ಸುಪರ್ ವೈಸರ್ ಆಗಿ ಇಬ್ಬರೂ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಪಿಕ್ ಅಪ್ ಜೀಪ್ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸ್ಥಳಸಲ್ಲೇ ಸಾವಿಗೀಡಾಗಿದ್ದಾರೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.