Home ಟಾಪ್ ಸುದ್ದಿಗಳು ಕಾರು, ಬೈಕ್ ನಡುವೆ ಅಪಘಾತ: ಮೂವರು ಸಾವು

ಕಾರು, ಬೈಕ್ ನಡುವೆ ಅಪಘಾತ: ಮೂವರು ಸಾವು

ಬೆಳಗಾವಿ: ಕಾರು, ಬೈಕ್ ನಡುವೆ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗೋಕಾಕ್ ತಾಲೂಕಿನ ಸಂಗನಕೇರಿ ಬಳಿ ನಡೆದಿದೆ.

ಮೃತರನ್ನು ಗೋಪಾಲ ಮುತ್ನಾಳ(36), ರಾಮಣ್ಣ ಮಗ್ಗೆಪ್ಪಗೋಳ(40), ನೀಲವ್ವ ತಳವಾರ(44) ಎಂದು ಗುರುತಿಸಲಾಗಿದೆ.

ಗೋಪಾಲ, ರಾಮಣ್ಣ ಇಬ್ಬರೂ ಪಿ.ಜಿ ಹುಣಶ್ಯಾಳ ಗ್ರಾಮದ ನಿವಾಸಿಗಳು. ನೀಲವ್ವ ತಳವಾರ ಮೂಡಲಗಿ ತಾಲೂಕಿನ ನಾಗನೂರು ನಿವಾಸಿ. ಮೊಹರಂ ಆಚರಣೆಗೆಂದು ಗೋಕಾಕ್ ತಾಲೂಕಿನ ಮಕ್ಕಳಗೇರಿ ಗ್ರಾಮಕ್ಕೆ ತೆರಳುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಗೋಕಾಕ್ ತಾಲೂಕಿನ ಸಂಗನಕೇರಿ ಬಳಿ ಕಾರು ಡಿಕ್ಕಿಯಾಗಿ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್‍ ಗೆ ಡಿಕ್ಕಿಯಾಗಿ ಕಾರು ಸಹ ಪಲ್ಟಿಯಾಗಿದ್ದು, ಸ್ಥಳಕ್ಕೆ ಘಟಪ್ರಭಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Join Whatsapp
Exit mobile version