Home ಟಾಪ್ ಸುದ್ದಿಗಳು ಪ್ರಾಂಶುಪಾಲೆಯನ್ನು ವಿದ್ಯಾರ್ಥಿನಿಗೆ ಕೈ ಮುಗಿದು, ಕಾಲಿಗೆ ಬೀಳಿಸಿದ ಎಬಿವಿಪಿ ಮುಖಂಡ: ವೈರಲ್ ವಿಡಿಯೋಗೆ ನೆಟ್ಟಿಗರ ಆಕ್ರೋಶ...

ಪ್ರಾಂಶುಪಾಲೆಯನ್ನು ವಿದ್ಯಾರ್ಥಿನಿಗೆ ಕೈ ಮುಗಿದು, ಕಾಲಿಗೆ ಬೀಳಿಸಿದ ಎಬಿವಿಪಿ ಮುಖಂಡ: ವೈರಲ್ ವಿಡಿಯೋಗೆ ನೆಟ್ಟಿಗರ ಆಕ್ರೋಶ !

ಅಹಮದಾಬಾದ್: ಗುಜರಾತಿನ ಪಾಲಿಟೆಕ್ನಿಕ್ ಕಾಲೇಜಿನ ಮಹಿಳಾ ಪ್ರಾಂಶುಪಾಲರೊಬ್ಬರು ವಿದ್ಯಾರ್ಥಿಯ ಮುಂದೆ ತನ್ನ ಎರಡು ಕೈಗಳನ್ನು ಕಟ್ಟಿ, ಕೈಮುಗಿದು ಆಕೆಯ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ ಘಟನೆಯ ವೀಡಿಯೋ ವೈರಲಾಗಿದೆ. ಈ ಘಟನೆ ಗುರುವಾರ ಅಹಮದಾಬಾದ್ ನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.

ವಿದ್ಯಾರ್ಥಿಗಳು ಪ್ರಾಂಶುಪಾಲೆಯ ಕಾಲಿಗೆ ಬೀಳುವ ಬದಲಿಗೆ ಹೀಗೆ ತದ್ವಿರುದ್ಧ ಆಗಿರುವುದರ ಘಟನೆಯ ಹಿಂದಿರುವ ಆರೋಪಿ ಆರೆಸ್ಸೆಸ್ ನ ವಿದ್ಯಾರ್ಥಿ ಘಟಕವಾಗಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಮುಖಂಡನಾಗಿದ್ದಾನೆ.

ಗುರುವಾರ ಇತರ ಎಬಿವಿಪಿ ಸದಸ್ಯರೊಂದಿಗೆ ಎಸ್‌ಎಎಲ್ ಡಿಪ್ಲೊಮಾ ಕಾಲೇಜಿನ ವಿದ್ಯಾರ್ಥಿ ಹಾಗೂ ಎಬಿವಿಪಿ ಮುಖಂಡ ಅಕ್ಷತ್ ಜೈಸ್ವಾಲ್ ಪ್ರಾಂಶುಪಾಲ ಮೋನಿಕಾ ಸ್ವಾಮಿ ಅವರ ಚೇಂಬರ್‌ಗೆ ತೆರಳಿದ್ದಾನೆ. ಕಾಲೇಜಿನಲ್ಲಿ ಎರಡನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಸಹಪಾಠಿ ವಿದ್ಯಾರ್ಥಿನಿಗೆ ಸಾಕಷ್ಟು ಹಾಜರಾತಿ ಇಲ್ಲದ ಕಾರಣಕ್ಕೆ ಪ್ರಾಂಶುಪಾಲೆಯ ಜೊತೆ ಜಗಳವಾಡಿದ್ದಾರೆ. ನಂತರ, ವಿದ್ಯಾರ್ಥಿನಿಯ ಮುಂದೆ ಕ್ಷಮೆಯಾಚಿಸುವಂತೆ ಪ್ರಾಂಶುಪಾಲರನ್ನು ಬಲವಂತ ಮಾಡುತ್ತಾರೆ. ಅದರಂತೆ ವಿದ್ಯಾರ್ಥಿನಿಯ ಕೈ ಜೋಡಿಸಿ ನಮಸ್ಕರಿಸುವ ಪ್ರಾಂಶುಪಾಲೆ ನಂತರ ವಿದ್ಯಾರ್ಥಿನಿಯ ಪಾದಗಳನ್ನು ಸ್ಪರ್ಶಿಸುವುದು ವಿಡಿಯೋದಲ್ಲಿದೆ.

ಎಬಿವಿಪಿಯ ಈ ನಡೆಯನ್ನು ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಖಂಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಆಕ್ರೋಶಗಳು ವ್ಯಕ್ತವಾಗಿವೆ.

Join Whatsapp
Exit mobile version