ಮಂಗಳೂರು: ನಗರದ ಹೊರವಲಯದ ಕೂಳೂರು ಸಮೀಪದ ಪಂಜಿಮೊಗರು-ಉರುಂದಾಡಿ ಎಂಬಲ್ಲಿ ನಿನ್ನೆ ದುಷ್ಕರ್ಮಿಗಳು ಜೆಸಿಬಿ ಮೂಲಕ ದ್ವಂಸ ಗೈಯಲ್ಪಟ್ಟ ಕ್ರೈಸ್ತ ಧರ್ಮದ ಪ್ರಾರ್ಥನಾ ಕೇಂದ್ರವಾದ ಆಂಟನಿ ಹೋಲಿಕ್ರಾಸ್ ಪ್ರಾರ್ಥನಾ ಕೇಂದ್ರಕ್ಕೆ ಇಂದು SDPI ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಕುಳಾಯಿಯವರ ನೇತ್ರತ್ವದ ನಿಯೋಗ ಭೇಟಿ ನೀಡಿ ಕೇಂದ್ರದ ಮುಖ್ಯಸ್ಥರಾದ ಆಂಟನಿ ಪ್ರಕಾಶ್ ಲೋಬೋ ಮತ್ತು ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು
ಈ ಘಟನೆಯನ್ನ ಖಂಡಿಸಿದ SDPI ನಿಯೋಗವು ಇದರ ಹಿಂದಿರುವ ಎಲ್ಲಾ ಶಕ್ತಿಗಳನ್ನು ಬಂಧಿಸಿ ಕಠಿಣವಾದ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು. ಈ ದುಷ್ಕ್ರತ್ಯದ ಹಿಂದೆ ಸಂಘಪರಿವಾರ ಪ್ರೇರಿತ ಸ್ಥಳೀಯ ಸಂಘಟನೆ ಯೊಂದರ ಕೈವಾಡ ಇರುವುದು ಸ್ಪಷ್ಟವಾಗಿದೆ, ಜಿಲ್ಲೆಯಲ್ಲಿ ಗಲಭೆ ಸ್ರಿಷ್ಟಿಸಲು ಹಾತೊರೆಯುತ್ತಿರುವ ಮತಾಂದ ಶಕ್ತಿಗಳು ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿದ್ದಾರೆ , ಇದು ಸಂಘಪರಿವಾರದ ಹತಾಶೆಯ ಮನೋಭಾವನೆ ಯಾಗಿದೆ ಎಂದರು , ನಮ್ಮ ಸಂವಿದಾನದ 25 ನೇ ಪರಿಚ್ಚೇದವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಅವನ ಧರ್ಮದ ಆಚರಣೆ ಮಾಡಲು ಅದನ್ನು ಪ್ರಚಾರ ಮಾಡಲು ಮುಕ್ತ ಅವಕಾಶ ಮತ್ತು ಸ್ವಾತಂತ್ರ ನೀಡಿದೆ . ಪ್ರತಿಯೊಂದು ಧರ್ಮಕ್ಕೂ ಅದರದ್ದೇ ಆದ ಘನತೆ ಗೌರವವಿದೆ . ಆದರೆ ಇಂತಹ ಹೇಡಿತನದ ದಾಳಿಗಳ ಮೂಲಕ ಯಾವುದೇ ಧರ್ಮದ ಆಚರಣೆಯನ್ನು, ಗೌರವವನ್ನು ಇಲ್ಲವಾಗಿಸಲು ಸಾದ್ಯವಿಲ್ಲ ಎಂಬುದು SDPI ಪಕ್ಷದ ಸ್ಪಷ್ಟ ನಿಲುವಾಗಿದೆ. ಇಂತಹ ಸಂದರ್ಭದಲ್ಲಿ ಸಂತ್ರಸ್ತರ ಪರವಾಗಿ ಪಕ್ಷವು ಹೋರಾಟದ ಮುಂಚೂಣಿಯಲ್ಲಿ ಇರಲಿದೆ ಎಂದು ಭರವಸೆ ನೀಡಿದರು
ಅದ್ದರಿಂದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಿಲ್ಲೆಯ ಮತಾಂದ ಹಿಂದುತ್ವ ಶಕ್ತಿಗಳನ್ನು ಮಟ್ಟಹಾಕಬೇಕು ಹಾಗೂ ಅಲ್ಪಸಂಖ್ಯಾತ ಸಮುದಾಯದ ಪ್ರಾರ್ಥನಾ ಕೇಂದ್ರಗಳಿಗೆ ಸೂಕ್ತ ಭದ್ರತೆ ಮತ್ತು ರಕ್ಷಣೆ ಒದಗಿಸಬೇಕೆಂದು ಅಬೂಬಕ್ಕರ್ ಕುಳಾಯಿ ಒತ್ತಾಯಿಸಿದರು . ಬೇಟಿ ನೀಡಿದ ನಿಯೋಗದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಅಧ್ಯಕ್ಷರಾದ ಯಾಸೀನ್ ಅರ್ಕುಳ, ಸ್ಥಳೀಯ ಮುಖಂಡರಾದ ಹನೀಫ್ ಕಾವೂರು ಮತ್ತು ಇತರರು ಉಪಸ್ಥಿತರಿದ್ದರು