ಮಡಿಕೇರಿ: ಅಭ್ಯತ್ ಮಂಗಲದಲ್ಲಿ ಮಿತಿ ಮೀರಿದ ಕಾಡಾನೆ ಹಾವಳಿ

Prasthutha|

ಮಡಿಕೇರಿ: ಇಲ್ಲಿನ ಅಭ್ಯತ್ ಮಂಗಲ ವ್ಯಾಪ್ತಿಯಲ್ಲಿ ಮತ್ತೆ ಕಾಡಾನೆ ಹಾವಳಿ ಮಿತಿ ಮೀರಿದ್ದು, ತೋಟ, ಗದ್ದೆಗಳಿಗೆ ನುಗ್ಗಿರುವ ಗಜಹಿಂಡು ಸಾಕಷ್ಟು ಹಾನಿ ಉಂಟುಮಾಡಿದೆ.

- Advertisement -

ಗ್ರಾಮದ ಬೆಳೆಗಾರ ಅಂಚೆಮನೆ ಸುಧಾಕರ ಅವರು ಹುಲ್ಲಿಗಾಗಿ ಬೆಳೆದ 2 ನೇ ಬೆಳೆ ಕಾಡಾನೆ ಪಾಲಾಗಿದೆ. ಸುಮಾರು 100 ಕ್ಕೂ ಅಧಿಕ ಅಡಿಕೆ ಗಿಡಗಳು ನಾಶವಾಗಿವೆ. ಅಕ್ಕಪಕ್ಕದ ತೋಟಗಳಿಗೂ ಆನೆಗಳು ಲಗ್ಗೆ ಇಟ್ಟಿವೆ. ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬೆಳೆಹಾನಿ ಪರಿಹಾರ ನೀಡಬೇಕು ಮತ್ತು ಕಾಡಾನೆಗಳನ್ನು ಕಾಡಿಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೆಳೆಗಾರರು ಒತ್ತಾಯಿಸಿದರು.

Join Whatsapp
Exit mobile version