Home ಟಾಪ್ ಸುದ್ದಿಗಳು ಬೇರೊಬ್ಬನ ಜತೆ ಮದುವೆಯಾಗುತ್ತಿದ್ದ ಪ್ರೇಯಸಿಯನ್ನು ಮಂಟಪದಲ್ಲೇ ಗುಂಡಿಟ್ಟು ಕೊಂದ ಮಾಜಿ ಪ್ರಿಯಕರ

ಬೇರೊಬ್ಬನ ಜತೆ ಮದುವೆಯಾಗುತ್ತಿದ್ದ ಪ್ರೇಯಸಿಯನ್ನು ಮಂಟಪದಲ್ಲೇ ಗುಂಡಿಟ್ಟು ಕೊಂದ ಮಾಜಿ ಪ್ರಿಯಕರ

ಮಥುರಾ: ಬೇರೊಬ್ಬನ ಜತೆ ಮದುವೆಯಾಗುತ್ತಿದ್ದ ಪ್ರೇಯಸಿಗೆ ಕಲ್ಯಾಣ ಮಂಟಪದಲ್ಲೇ ಮಾಜಿ ಪ್ರಿಯಕರ ಗುಂಡಿಟ್ಟು ಕೊಂದಿರುವ ಘಟನೆ ಮಥುರಾದ ಮುಬರಿಕಪುರ ಗ್ರಾಮದ ನೌಜಹೀಲ್ ಏರಿಯಾದಲ್ಲಿ ನಡೆದಿದೆ.


ಮೃತ ವಧುವಿನ ಹೆಸರು ಕಾಜಲ್ (20) ಎಂದು ಗುರುತಿಸಲಾಗಿದೆ. ಕೊರಳಿಗೆ ಹೂವಿನ ಹಾರ ಹಾಕುವ ಪದ್ಧತಿ ಮುಗಿಯುತ್ತಿದ್ದಂತೆ ಮಂಟಪದಲ್ಲೇ ಇದ್ದ ಮಾಜಿ ಪ್ರಿಯಕರ, ಕಾಜಲ್ ಗೆ ಗುಂಡಿಕ್ಕಿದ್ದಾನೆ. ಗುಂಡಿನ ಶಬ್ದ ಕೇಳಿ ವಧುವಿನ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿ ಬಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗಳನ್ನು ನೋಡಿ ಆಘಾತಕ್ಕೆ ಒಳಗಾದರು. ಬಳಿಕ ಕಾಜಲ್ ನನ್ನು ಆಸ್ಪತ್ರೆಗೆ ಸಾಗಿಸಲಾದರೂ ಆಕೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.


ಘಟನೆಯ ಬಳಿಕ ವಧುವಿನ ತಂದೆ ದೂರು ದಾಖಲಿಸಿದ್ದಾರೆ.

Join Whatsapp
Exit mobile version