ಚಿಕ್ಕಮಗಳೂರು : ಭಾರೀ ಮಳೆಯಿಂದ ಕಿರುಸೇತುವೆ ಸಂಪೂರ್ಣ ಹಾನಿಗೊಂಡಿರುವ ಘಟನೆ ಕಳಸ ತಾಲೂಕಿನ ಅಳಗೋಡಿನಲ್ಲಿ ನಡೆದಿದೆ.
ಕಳೆದ ಭಾರಿ ಮಳೆಗೆ ಅಳಗೋಡು ರಸ್ತೆಹಾನಿಗೊಳಗಾಗಿದ್ದು,ರಸ್ತೆ ಹಾನಿಯಿಂದ ಜನರ ಓಡಾಟಕ್ಕೆ ತೊಂದರೆಯುಂಟಾಗಿದೆ. ಅಪಾಯದಲ್ಲಿರುವ ಈ ರಸ್ತೆಯನ್ನು ದಾಟಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಬೇಕಾದ ಪರಿಸ್ಥಿತಿಯುಂಟಾಗಿದೆ.
ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಇದು ವರೆಗೂ ಕಿರುಸೇತುವೆ ದುರಸ್ಥಿಯಾಗದೇ ಹಾಗೆಯೇ ಇದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಮೂಡಿಗೆರೆ ಕ್ಷೇತ್ರಕ್ಕೆ ಬಂದ ಹಣ ಎಲ್ಲಿಗೆ ಹೋಯ್ತು ಎಂದು ಪ್ರಶ್ನಿಸಿದ್ದಾರೆ. ರಸ್ತೆ ದುರಸ್ಥಿಗೊಳಿಸದಿದ್ದಲ್ಲಿಪೊರಕೆ ಹಿಡ್ಕೊಂಡು ಶಾಸಕರ ಮನೆಗೆ ಹೋಗುತ್ತೇವೆ ಎಂದು ಅಳಗೋಡು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.