17ರ ಬಾಲಕನಿಗೆ 55 ಬಾರಿ ಇರಿದು ಕತ್ತು ಸೀಳಿ ಕೊಂದು ಡ್ಯಾನ್ಸ್ ಮಾಡಿ ವಿಕೃತಿ ಮೆರೆದ 16ರ ಬಾಲಕ!

Prasthutha|

ನವದೆಹಲಿ: 16 ವರ್ಷದ ಬಾಲಕ 17 ವರ್ಷದ ಬಾಲಕನಿಗೆ 55ಕ್ಕೂ ಹೆಚ್ಚು ಬಾರಿ ಇರಿದು, ಬಳಿಕ ಆತನ ಕತ್ತು ಸೀಳಿ ಹತ್ಯೆ ಮಾಡಿದ್ದಲ್ಲದೆ, ಬಳಿಕ ಶವದ ಡಾನ್ಸ್ ಮಾಡುತ್ತಾ ರಸ್ತೆಯಲ್ಲಿ ಎಳೆದುಕೊಂಡು ಹೋದ ಘಟನೆ ಪೂರ್ವ ದೆಹಲಿಯ ವೆಲ್ಕಮ್ ಕಾಲೋನಿಯಲ್ಲಿ ನಡೆದಿದೆ. ಭೀಕರ ದಾಳಿಗೊಳಗಾದ ಯುವಕನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.

- Advertisement -

ಘಟನೆ ಮಂಗಳವಾರ ರಾತ್ರಿ 11.15ರ ಸುಮಾರಿಗೆ ನಡೆದಿದೆ. ಅವನು ಭೀಕರ ಕೃತ್ಯವನ್ನು ಮಾಡುವಾಗ ನೃತ್ಯ ಮಾಡುತ್ತಿದ್ದ. ಏನಾಗುತ್ತಿದೆ ಎಂದು ನೋಡಲು ಬಾಗಿಲು ತೆರೆಯಲು ಯತ್ನಿಸಿದ ಒಬ್ಬ ವ್ಯಕ್ತಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ್ದಾನೆ” ಎಂದು ಅಪರಾಧದ ತನಿಖೆ ನಡೆಸುತ್ತಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾವು ಈಗಾಗಲೇ ಕೊಲೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಂಡಿದ್ದೇವೆ. ಯುವಕ ಚಾಕುವನ್ನು ಎಲ್ಲಿಂದ ಖರೀದಿಸಿದ ಎಂಬ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಉಪ ಆಯುಕ್ತ ಜಾಯ್ ಟಿರ್ಕಿ ಹೇಳಿದ್ದಾರೆ.

- Advertisement -

ಘಟನೆಯು ಅತ್ಯಂತ ಭೀಕರ ಎಂದು ಆ ಅಧಿಕಾರಿ ಹೇಳಿದ್ದಾರೆ.




Join Whatsapp