ಕೆನಡಾದಲ್ಲಿರುವ ಕಪಿಲ್ ಶರ್ಮಾ ಕೆಫೆ ಮೇಲೆ ಗುಂಡಿನ ದಾಳಿ

- Advertisement -

ಮುಂಬೈ: ಹಿಂದಿಯ ಜನಪ್ರಿಯ ‘ಕಪಿಲ್ ಶರ್ಮಾ ಶೋ’ಮೂಲಕ ಖ್ಯಾತರಾಗಿರುವ ಕಾಮಿಡಿಯನ್ ಕಪಿಲ್ ಶರ್ಮಾ ಅವರ ಕೆನಡಾದಲ್ಲಿರುವ ಕೆಫೆ ಮೇಲೆ ಗುಂಡಿನ ದಾಳಿ ನಡೆದಿದೆ. ಒಂಬತ್ತು ಸುತ್ತು ಗುಂಡು ಹಾರಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

- Advertisement -

ದಾಳಿಯ ಹೊಣೆಯನ್ನು ಖಾಲಿಸ್ತಾನಿ ಉಗ್ರ ಹರ್ಜೀತ್ ಸಿಂಗ್ ಲಡ್ಡಿ ಹೊತ್ತುಕೊಂಡಿದ್ದಾನೆ. ಘಟನೆಯಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ.

ಕೆನಡಾದ ಸರ್ರೆ ನಗರದಲ್ಲಿ ಕೆಲವೇ ದಿನಗಳ ಹಿಂದೆ ಆರಂಭಗೊಂಡಿದ್ದ ಈ ಕೆಫೆಗೆ ‘ಕ್ಯಾಪ್ಸ್ ಕೆಫೆ’ಎಂದು ಹೆಸರಿಡಲಾಗಿದ್ದು, ರೆಸ್ಟೋರೆಂಟ್ ಉದ್ಯಮಕ್ಕೆ ಕಾಲಿಟ್ಟಿರುವ ಕಪಿಲ್ ಶರ್ಮಾ ಅವರ ಮೊದಲ ಕೆಫೆ ಇದಾಗಿದೆ. ಪತ್ನಿ ಗಿನ್ನಿ ಚತ್ರತ್ ಸಹ ಈ ಕೆಫೆಯ ಸಹ ಮಾಲೀಕರಾಗಿದ್ದಾರೆ.

- Advertisement -

ಕಾರಿನಲ್ಲಿ ಕುಳಿತ ವ್ಯಕ್ತಿಯೊಬ್ಬ ಕೆಫೆ ಮೇಲೆ 9 ಬಾರಿ ಗುಂಡು ಹಾರಿಸಿರುವುದು ವಿಡಿಯೊದಲ್ಲಿ ಕಂಡುಬಂದಿದೆ.

ಈ ಹಿಂದೆ ಕಪಿಲ್ ಶರ್ಮಾ ನೀಡಿದ್ದ ಹೇಳಿಕೆಯಿಂದ ಕೋಪಗೊಂಡು ಲಡ್ಡಿ ಈ ದಾಳಿ ನಡೆಸಿದ್ದಾನೆ ಎಂದು ವರದಿ ತಿಳಿಸಿದೆ.

- Advertisement -


Must Read

Related Articles