ನಟಿ ಲಿಶಲ್ಲಿನಿ ಕನರನ್’ಗೆ ಲೈಂಗಿಕ ಕಿರುಕುಳ ನೀಡಿದ ಅರ್ಚಕ..!

- Advertisement -

ಕೌಲಾಲಂಪುರ: ದೇಗುಲಕ್ಕೆ ಬಂದಿದ್ದ ಮಿಸ್​​ಗ್ರ್ಯಾಂಡ್​ ಮಲೇಷ್ಯಾ 2021 ವಿಜೇತೆ ಲಿಶಲ್ಲಿನಿ ಕನರನ್ ಗೆ ಪೂಜಾರಿಯೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ.

- Advertisement -

ರೂಪದರ್ಶಿಯೊಬ್ಬರು ದೇಗುಲಕ್ಕೆ ಭೇಟಿ ನೀಡಿದ್ದ ವೇಳೆ ದೇಗುಲದ ಪೂಜಾರಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಭಾರತ ಮೂಲದ ನಟಿ ಹಾಗೂ ದೂರದರ್ಶನ ನಿರೂಪಕಿ ಹಾಗೂ ಮಿಸ್​​ಗ್ರ್ಯಾಂಡ್​ ಮಲೇಷ್ಯಾ 2021 ವಿಜೇತೆ ಲಿಶಾಲ್ಲಿನಿ ಕನರನ್​​ ಈ ವಿಚಾರವನ್ನುತಮ್ಮ ಇನ್ ಸ್ಟಾಗ್ರಾಮ್ ಬಹಿರಂಗ ಪಡಿಸಿದ್ದಾರೆ. ಮಾತ್ರವಲ್ಲದೇ ಪೂಜಾರಿ ವಿರುದ್ಧ ದೂರು ಸಲ್ಲಿಸಿರುವುದಾಗಿ ಹೇಳಿದ್ದಾರೆ.

- Advertisement -

ಇದೀಗ ರೂಪದರ್ಶಿ ಲಿಶಾಲ್ಲಿನಿ ಕನರನ್​​ ನೀಡಿರುವ ದೂರಿನ ಅನ್ವಯ ಪೊಲೀಸರು ಲೈಂಗಿಕ ಕಿರುಕುಳ ನೀಡಿದ ಪೂಜಾರಿಗಾಗಿ ಶೋಧ ನಡೆಸಿದ್ದಾರೆ.

ಇಷ್ಟಕ್ಕೂ ಆಗಿದ್ದೇನು?

ಇತ್ತೀಚೆಗೆ ರೂಪದರ್ಶಿ ಲಿಶಾಲ್ಲಿನಿ ಕನರನ್​​ ತಾವು ಯಾವಾಗಲೂ ಭೇಟಿ ನೀಡುತ್ತಿದ್ದ ಮಲೇಷ್ಯಾದ ಸೆಪಾಂಗ್​ನಲ್ಲಿರುವ ಮಾರಿಯಮ್ಮನ್​ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಈಕೆಯನ್ನು ನೋಡಿದ ಪೂಜಾರಿ ವಿಶೇಷ ಪೂಜೆ ನೆಪದಲ್ಲಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.

- Advertisement -


Must Read

Related Articles