ಹೆಣ್ಣು ಮಕ್ಕಳನ್ನು ಅವಹೇಳನ ಮಾಡುವುದು ಬಿಜೆಪಿ ಸಂಸ್ಕೃತಿ: ಹರಿಪ್ರಸಾದ್ ಕಿಡಿ

- Advertisement -

ಬೆಂಗಳೂರು: ಬಿಜೆಪಿ ಅವರ ಸಂಸ್ಕೃತಿಯೇ ಹೆಣ್ಣುಮಕ್ಕಳಿಗೆ ಅವಹೇಳನ ಮಾಡುವುದು ಎಂದು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

- Advertisement -

ಸಿಎಸ್ ಶಾಲಿನಿ ರಜನೀಶ್ ಬಗ್ಗೆ ಬಿಜೆಪಿ ಎಂಎಲ್‌ಸಿ ರವಿಕುಮಾರ್ ಅವಹೇಳನ ಹೇಳಿಕೆ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರವಿಕುಮಾರ್ ಹೀಗೆ ಮಾತಾಡಿರೋದು ಹೊಸದೇನು ಅಲ್ಲ. ಬಿಜೆಪಿಯ ಸಂಸ್ಕೃತಿಯೇ ಹೆಣ್ಣುಮಕ್ಕಳಿಗೆ ಅವಹೇಳನವಾಗಿ ಮಾತಾಡೋದು. ನರೇಂದ್ರ ಮೋದಿ ಅವರೇ ಶಶಿ ತರೂರ್ ಪತ್ನಿ ಬಳಿ 50 ಕೋಟಿ ಗರ್ಲ್ ಫ್ರೆಂಡ್ಸ್ ಅಂತ ಹೇಳಿದ್ರು. ಬಿಜೆಪಿ ಅವರಿಂದ ಇದನ್ನ ಬಿಟ್ಟು ಬೇರೆ ಏನು ನಿರೀಕ್ಷೆ ಮಾಡಲು ಆಗಲ್ಲ. ರವಿಕುಮಾರ್ ಕೇಸ್‌ನಲ್ಲಿ ಕೋರ್ಟ್ ಎಫ್‌ಐಆರ್ ರದ್ದು ಮಾಡಿಲ್ಲ. ಅದೇ ಸಂತೋಷದ ಸುದ್ದಿ ಎಂದರು.

ಕೋರ್ಟ್‌ಗಳು ಕಠಿಣ ಕ್ರಮ ತೆಗೆದುಕೊಂಡಾಗ ಇಂತಹ ಮಾತುಗಳಿಗೆ ಕಡಿವಾಣ ಬೀಳುತ್ತವೆ. ಕೋರ್ಟ್ ಎಫ್‌ಐಆರ್ ರದ್ದು ಮಾಡೋದು, ಕೇಸ್ ರದ್ದು ಮಾಡೋದು ಮಾಡಿದ್ರೆ ದೇಶದಲ್ಲಿ ಇವರನ್ನ ಯಾರು ಕೇಳಲ್ಲ ಅಂದುಕೊಳ್ಳುತ್ತಾರೆ. ಈಗ ಜಾಮೀನು ಮೇಲೆ ಅವರು ಹೊರಗೆ ಇದ್ದಾರೆ. ಈಗ ಅವರ ನಾಲಿಗೆಗೆ ಕಡಿವಾಣ ಬೀಳುತ್ತೆ ಅನ್ನಿಸುತ್ತದೆ. ಸದನಕ್ಕೆ ಅಗೌರವ ತಂದಿದ್ದಾರೆ ಅವರನ್ನು ವಜಾ ಮಾಡಿ. ಇಂತಹ ಭಾಷೆ ಪ್ರಯೋಗ ಸರಿಯಲ್ಲ ಎಂದು ಸಭಾಪತಿಗಳಿಗೆ ನಾವು ದೂರು ಕೊಟ್ಟಿದ್ದೇವೆ. ಸಭಾಪತಿಗಳು ಏನು ಕ್ರಮ ತೆಗೆದುಕೊಳ್ತಾರೆ ನೋಡೋಣ. ಸದನ ಪ್ರಾರಂಭವಾದಾಗ ಈ ವಿಷಯ ಪ್ರಸ್ತಾಪ ಮಾಡ್ತೀವಿ ಎಂದು ತಿಳಿಸಿದರು.

- Advertisement -


Must Read

Related Articles