ಸಂಘಪರಿವಾರ ಸಮಾಜದ ಸ್ವಾಸ್ತ್ಯ ಕೆಡಿಸುವ ಹುನ್ನಾರದ ಕುರಿತು ಕಾಂಗ್ರೆಸ್ ಆಡಳಿತದಲ್ಲಿ ಕೇಳಬಾರದೇ: ಅಬ್ದುಲ್ ಮಜೀದ್ ಪ್ರಶ್ನೆ

- Advertisement -

ಬೆಂಗಳೂರು: ಉಡುಪಿ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸುವ ಹಿನ್ನೆಲೆಯಲ್ಲಿ ದನದ ರುಂಡವನ್ನು ಎಸೆದು ಅದನ್ನು ಮುಸ್ಲಿಮರ ತಲೆಗೆ ಕಟ್ಟಲು ಪ್ರಯತ್ನಿಸಿ ಪೋಲಿಸರ ನಿಷ್ಪಕ್ಷಪಾತ ತನಿಖೆಯಿಂದ ನೈಜ ಆರೋಪಿಗಳು ಸಿಕ್ಕಿ ಬಿದ್ದ ನಂತರವೂ ಪುನಃ ಮುಸ್ಲಿಮರ ತಲೆಗೆ ಆ ಪ್ರಕರಣವನ್ನು ಕಟ್ಟಲು ಪ್ರಚೋದನಕಾರಿ ಹೇಳಿಕೆ ನೀಡಿದ ಶರಣ್ ಪಂಪ್‌ವೆಲ್ ಹಾಗೂ ಸಂಘಪರಿವಾರ ಸಂಘಟನೆಗಳ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಧ್ವನಿ ಎತ್ತಿದ್ದಕ್ಕೆ ಪಕ್ಷದ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮೇಲೆ ಪ್ರಕರಣ ದಾಖಲು ಮಾಡಿದ್ದನ್ನು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ರವರು ತೀವ್ರವಾಗಿ ಖಂಡಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಸಂಘಪರಿವಾರ ಸಮಾಜದ ಸ್ವಾಸ್ತ್ಯ ಕೆಡಿಸುವ ಹುನ್ನಾರದ ವಿರುದ್ಧ ಕಾಂಗ್ರೆಸ್ ಆಡಳಿತದಲ್ಲಿ ಕೇಳುವುದನ್ನು ನಿಷೇಧಿಸಲಾಗಿದೆಯೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲೆಯನ್ನು ಸಂಘಪರಿವಾರ ನಿರಂತರವಾಗಿ  ಕೋಮು ದ್ವೇಷ ಹರಡಿಸಲು ಬಳಸಿಕೊಳ್ಳುತ್ತಿದೆ.ಸರ್ಕಾರ ಅವರ ವಿರುದ್ಧ ಮೃದು ಧೋರಣೆ ಅನುಸರಿಸುತ್ತಿರುವುದರಿಂದ ಸಂಘಪರಿವಾರ ದ್ವೇಷವನ್ನು ಪುನರಾವರ್ತನೆ ಮಾಡುತ್ತಲೇ ಇದೆ.ರಾಜ್ಯ ಮತ್ತು ದೇಶದ ಆಂತರಿಕ ಭದ್ರತೆಗೆ,ಆರ್ಥಿಕತೆಗೆ ಹಾಗೂ ಅಭಿವೃದ್ಧಿಗೆ ಕಂಟಕವಾಗಿರುವ ಸಂಘಪರಿವಾರದ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಅವರ ವಿರುದ್ಧ ಧ್ವನಿ ಎತ್ತಿದವರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ನಾಚಿಗೇಡು ಎಂದು ಗುಡುಗಿದ್ದಾರೆ.

- Advertisement -

ಪೋಲಿಸ್ ಇಲಾಖೆ ರಿಯಾಝ್ ಕಡಂಬು ಮೇಲಿನ ಪ್ರಕರಣವನ್ನು ಕೂಡಲೇ ಕಾನೂನು ಪ್ರಕಾರ ಹಿಂಪಡೆಯಬೇಕು ಇಲ್ಲದಿದ್ದಲ್ಲಿ ನ್ಯಾಯಾಲಯದಲ್ಲಿ ಪೋಲಿಸರ ನಡೆಯನ್ನು ಪ್ರಶ್ನಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

- Advertisement -


Must Read

Related Articles