ನಮ್ಮ ಸರ್ಕಾರ ಬಂದ ಮೇಲೆ ರಾಯರೆಡ್ಡಿಗೆ `ಸತ್ಯವಾನ್’ ಪ್ರಶಸ್ತಿ: ಅಶೋಕ್

- Advertisement -

ಬೆಂಗಳೂರು: ಸರ್ಕಾರದ ದುಸ್ಥಿತಿ ಬಗ್ಗೆ ಓಪನ್ ಆಗಿ ಹೇಳಿರುವ ಬಸವರಾಜ ರಾಯರೆಡ್ಡಿಗೆ ನಮ್ಮ ಸರ್ಕಾರ ಬಂದ ನಂತರ ಪ್ರಶಸ್ತಿ ಕೊಟ್ಟು ಸನ್ಮಾನ ಮಾಡ್ತೇವೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟಾಂಗ್ ಕೊಟ್ಟಿದ್ದಾರೆ.

- Advertisement -

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಗ್ಯಾರಂಟಿ ಬೇಕಾ, ರಸ್ತೆ ಬೇಕಾ ಎಂದು ರಾಯರೆಡ್ಡಿ ಬಹಿರಂಗ ಹೇಳಿಕೆ ನೀಡಿದ್ದಾರೆ. ಪುಣ್ಯಾತ್ಮ ಅವರೊಬ್ಬರು ಕರೆಕ್ಟ್ ಆಗಿ ಹೇಳಿದ್ದಾರೆ. ಈ ಸರ್ಕಾರ ಹೋಗೋವಾಗ ಜನರ ಕೈಗೆ ಚಿಪ್ಪು ಕೊಟ್ಟೇ ಹೋಗೋದು. ನಮ್ಮ ಸರ್ಕಾರ ಬಂದ ಮೇಲೆ ರಾಯರೆಡ್ಡಿಗೆ ಪ್ರಶಸ್ತಿ ಕೊಡ್ತೇವೆ. ಸರ್ಕಾರದ ಬಗ್ಗೆ ರಾಯರೆಡ್ಡಿ ಸತ್ಯ ಹೇಳಿದ್ದಾರೆ. ಹಾಗಾಗಿ ಅವರಿಗೆ `ಸತ್ಯವಾನ್ ರಾಯರೆಡ್ಡಿ’ ಪ್ರಶಸ್ತಿ ಕೊಡ್ತೇವೆ ಎಂದು ಟೀಕಿಸಿದ್ದಾರೆ

- Advertisement -


Must Read

Related Articles