ಮೊದಲಬಾರಿಗೆ ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ಸ್ಟ್ರೀಮ್ನಲ್ಲಿ ಇಬ್ಬರು ಮಹಿಳಾ ಅಧಿಕಾರಿಗಳನ್ನು ಪೈಲೆಟ್ಗಳಾಗಿ ಆಯ್ಕೆ ಮಾಡಲಾಗಿದೆ. ಯುದ್ಧನೌಕೆಗಳಲ್ಲಿಯೂ ಮಹಿಳಾ ಮಣಿಗಳು ತಮ್ಮ ಶಕ್ತಿ ಪ್ರದರ್ಶನ ನೀಡುತ್ತಿದ್ದು ಹಾರಾಟಕ್ಕೂ ಸಜ್ಜಾಗಿರುವುದು ಹೆಮ್ಮೆಯ ವಿಷಯವಾಗಿದೆ. ಸಬ್ ಲೆಫ್ಟಿನೆಂಟ್ (ಎಸ್ಎಲ್ಟಿ) ಕುಮುದಿನಿ ತ್ಯಾಗಿ ಮತ್ತು ಎಸ್ಎಲ್ಟಿ ರಿತಿ ಸಿಂಗ್ಯವರು ‘ವಿಂಗ್ಸ್’ ಗೌರವವನ್ನು ಪಡೆದ ಮಹಿಳಾಮಣಿಗಳಾಗಿದ್ದಾರೆ. ಯುದ್ಧನೌಕೆಗಳ ಡೆಕ್ನಿಂದ ಕಾರ್ಯನಿರ್ವಹಿಸುವ ಭಾರತದ ಮಹಿಳಾ ವಾಯುಗಾಮಿ ತಂತ್ರಜ್ಞರ ಮೊದಲ ಗುಂಪು ಇದಾಗಿದೆ.
ಈ ಮೊದಲು, ಸ್ಥಿರ ವಿಂಗ್ ವಿಮಾನಗಳಲ್ಲಿ ಮಹಿಳೆಯರ ಪ್ರವೇಶವನ್ನು ಸೀಮಿತಗೊಳಿಸಲಾಗಿತ್ತು. ಆದರೆ, ಇದೀಗ ಈ ನಿಯಮವನ್ನು ಸಡಿಲಗೊಳಿಸಲಾಗಿದೆ. ಇವರಿಬ್ಬರು ನೌಕಾಪಡೆಯ 17 ಅಧಿಕಾರಿಗಳ ಗುಂಪಿನ ಭಾಗವಾಗಿದ್ದು, ನಾಲ್ವರು ಮಹಿಳಾ ಅಧಿಕಾರಿಗಳು ಮತ್ತು ಭಾರತೀಯ ಕೋಸ್ಟ್ ಗಾರ್ಡ್ನ ಮೂವರು ಅಧಿಕಾರಿಗಳು ಸೇರಿದಂತೆ, ಇಂದು ಐಎನ್ಎಸ್ ಗರುಡಾದಲ್ಲಿ ನಡೆದ ಸಮಾರಂಭದಲ್ಲಿ ‘ನಿರೀಕ್ಷಕರು’ ಎಂಬ ಪದವಿ ನೀಡಿದ ನಂತರ ‘ವಿಂಗ್ಸ್’ ಗೌರವವನ್ನು ಕುಮುದಿನಿ ಹಾಗೂ ರಿತಿಯವರಿಗೆ ನೀಡಲಾಗಿದೆ ಎಂಬುದಾಗಿ ರಕ್ಷಣಾ ಸಚಿವಾಲಯ ಹೇಳಿಕೆ ನೀಡಿದೆ.
ಈ ಗುಂಪಿನಲ್ಲಿ ನಿಯಮಿತ ಬ್ಯಾಚ್ನ 13 ಅಧಿಕಾರಿಗಳು ಮತ್ತು ಶಾರ್ಟ್ ಸರ್ವಿಸ್ ಕಮಿಷನ್ ಬ್ಯಾಚ್ನ ನಾಲ್ವರು ಮಹಿಳಾ ಅಧಿಕಾರಿಗಳು ಇದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯ ಸಿಬ್ಬಂದಿ ಅಧಿಕಾರಿ(ತರಬೇತುದಾರು) ರಿಯರ್ ಅಡ್ಮಿರಲ್ ಆಂಟನಿ ಜಾರ್ಜ್ರ ವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು ಮತ್ತು ಪದವಿ ಪಡೆದ ಅಧಿಕಾರಿಗಳಿಗೆ ವಿಂಗ್ಸ್ ಪ್ರಧಾನ ಮಾಡಿದರು.