ಅಲ್ಪಸಂಖ್ಯಾತರ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾಸಿಕ ಫೆಲೋಷಿಪ್ ಹೆಚ್ಚಿಸಲು ತಕ್ಷಣ ಕ್ರಮ ಕೈಗೊಳ್ಳಿ: ಸಚಿವ ಜಮೀರ್’ಗೆ ಅಬ್ದುಲ್ ಮಜೀದ್ ಪತ್ರ

- Advertisement -

ಬೆಂಗಳೂರು: ಕರ್ನಾಟಕದಲ್ಲಿ ಅಲ್ಪಸಂಖ್ಯಾತರ—ಅದರಲ್ಲೂ ಮುಸ್ಲಿಂ ಸಮುದಾಯದ—ಉನ್ನತ ಶಿಕ್ಷಣದ ಸ್ಥಿತಿಗತಿಯ ಕುರಿತು ಗಂಭೀರ ಚಿಂತೆ ವ್ಯಕ್ತಪಡಿಸಿರುವ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಪತ್ರ ಬರೆದು ತ್ವರಿತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

- Advertisement -

ಮಾಹಿತಿಗಳ ಪ್ರಕಾರ, ಅಲ್ಪಸಂಖ್ಯಾತ ಸಮುದಾಯದಲ್ಲಿ ಎಂ.ಫಿಲ್ ಮತ್ತು ಪಿ.ಎಚ್.ಡಿ ಮಾಡುತ್ತಿರುವ ವಿದ್ಯಾರ್ಥಿಗಳ ಪ್ರಮಾಣ 1% ಕ್ಕಿಂತ ಕಡಿಮೆ. ಈ ಹಿಂದೆ ಕೇಂದ್ರ ಒಕ್ಕೂಟ ಸರ್ಕಾರ ಮೌಲಾನಾ ಆಜಾದ್ ನ್ಯಾಷನಲ್ ಫೆಲೋಷಿಪ್ ಅಡಿಯಲ್ಲಿ ಮಾಸಿಕ ₹35,000 ನೀಡುತ್ತಿದ್ದು, ಇದನ್ನು ಮೋದಿ ಸರ್ಕಾರ ರದ್ದುಪಡಿಸಿದ್ದು, ಇದು ರಾಷ್ಟ್ರದಲ್ಲಿ ಉನ್ನತ ಶಿಕ್ಷಣದ ಗುರಿ ಹೊಂದಿದ ಮುಸ್ಲಿಂ ಯುವಕರಿಗೆ ದೊಡ್ಡ ಹಿನ್ನಡೆಯಾಗಿದೆ.

ಇದಕ್ಕೂ ಮೇಲಾಗೀ, ರಾಜ್ಯ ಸರ್ಕಾರವೂ ಈ ಹಿಂದೆ ನೀಡುತ್ತಿದ್ದ ₹25,000 ಮಾಸಿಕ ಫೆಲೋಷಿಪ್ ಅನ್ನು ಈಗ ಕೇವಲ ₹10,000 ಕ್ಕೆ ಕಡಿತಗೊಳಿಸಿದ್ದು, ಈ  ನಿರ್ಧಾರ ಆಘಾತಕಾರಿ ಹಾಗೂ ವಿದ್ಯಾವಂತ ಸಮಾಜ ನಿರ್ಮಾಣದ ಧ್ಯೇಯಕ್ಕೆ ವಿರುದ್ಧವಾಗಿದೆ.

- Advertisement -

ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು, ಅರ್ಹ ಅಲ್ಪಸಂಖ್ಯಾತ ಸಂಶೋಧಕರಿಗೆ ಕನಿಷ್ಠ ₹50,000 ಮಾಸಿಕ ಫೆಲೋಷಿಪ್ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

SDPI ಪಕ್ಷದ 2025 ನೇ ಆಯ ವ್ಯಯ ವರ್ಷ ದ ಜನತಾ ಬಜೆಟ್ ಪುಸ್ತಕದಲ್ಲಿ ಈ ಬಗ್ಗೆ ಪ್ರಸ್ತಾಪ ಇದ್ದು ಈ ಬಜೆಟ್ ಬೇಡಿಕೆ ಪುಸ್ತಕ ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಮತ್ತು ಅಲ್ಪಸಂಖ್ಯತಾ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಕಚೇರಿಗೂ ಸುದೀರ್ಘ ಮನವಿಯನ್ನೂ ಸಲ್ಲಿಸಲಾಗಿದೆ.

“ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಉನ್ನತ ಶಿಕ್ಷಣವೇ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿಗೆ ಮಾರ್ಗ. ಈ ಬಗ್ಗೆ ಸರ್ಕಾರ ತಕ್ಷಣವೇ ಸ್ಪಷ್ಟವಾದ, ಪ್ರಗತಿಪರ ನಿರ್ಧಾರ ತೆಗೆದುಕೊಳ್ಳಬೇಕು,” ಎಂದು ಮಜೀದ್ ಆಗ್ರಹಿಸಿದ್ದಾರೆ.

- Advertisement -


Must Read

Related Articles