ಜಾತಿ ಗಣತಿ ವರದಿ ಚರ್ಚೆಗೆ 1 ವಾರ ವಿಶೇಷ ಸದನ ಕರೆಯಿರಿ: ಬಿಜೆಪಿ ಎಂಎಲ್ ​ಸಿ ರವಿಕುಮಾರ್ ಆಗ್ರಹ

- Advertisement -

ಬೆಳಗಾವಿ : ಕಾಂಗ್ರೆಸ್ ಪಕ್ಷದ ಬಹಳಷ್ಟು ನಾಯಕರಿಗೆ ಈ ಜಾತಿ ಗಣತಿಯ ಬಗ್ಗೆ ಅಸಮಾಧಾನ ಇದೆ. ಹಾಗಾಗಿ, ಸರ್ಕಾರ ಒಂದು ವಾರ ವಿಶೇಷ ಸದನ ಕರೆಯಬೇಕು. ಈ ವರದಿ ಎಷ್ಟು ವೈಜ್ಞಾನಿಕವಾಗಿದೆ..? ಅವೈಜ್ಞಾನಿಕವಾಗಿದೆ ಎಂಬುದರ ಕುರಿತು ಚರ್ಚೆ ಮಾಡೋಣ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಆಗ್ರಹಿಸಿದರು.

- Advertisement -

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾತಿ ಗಣತಿ ವರದಿ ಬಿಡುಗಡೆ ಕುರಿತು ಪ್ರಸ್ತಾವನೆ ಸಲ್ಲಿಸಿದ್ದಾರೆ. ಅದರ ಅಂಕಿ – ಅಂಶಗಳನ್ನು ಮಂತ್ರಿಗಳಿಗೆ ಕೊಡಲಾಗುತ್ತದೆ. ನಂತರ ಇದನ್ನು ಜಾರಿಗೊಳಿಸುವ ಕುರಿತು ನಿರ್ಧರಿಸುತ್ತೇವೆ ಎಂದು ಸಿಎಂ ಮತ್ತು ಡಿಸಿಎಂ ಹೇಳಿದ್ದಾರೆ. 2013 -14ರಲ್ಲಿ ಈ ಜಾತಿಗಣತಿ ಸಮೀಕ್ಷೆ ಆಗಿದೆ. ಲಕ್ಷಾಂತರ ಮನೆಗಳಿಗೆ ಹೋಗಿಲ್ಲ. ನನ್ನ ಮನೆಗೂ ಬಂದಿಲ್ಲ. ಇದು ಎಷ್ಟರ ಮಟ್ಟಿಗೆ ವೈಜ್ಞಾನಿಕ ಸಮೀಕ್ಷೆ ಅಂತ ಪರಿಗಣಿಸುವುದು? ಲಕ್ಷಾಂತರ ಸಣ್ಣ ಸಣ್ಣ ಸಮುದಾಯಗಳು ಅನ್ಯಾಯಕ್ಕೊಳಗಾಗಿವೆ. ಆದ್ದರಿಂದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಆಧಾರದ ಮೇಲೆ ಸಮೀಕ್ಷೆ ನಡೆಸಬೇಕು. ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಆ ಸಮುದಾಯಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.

ಆರ್ಥಿಕ ತಜ್ಞ, ಅನುಭವಿ ರಾಜಕಾರಣಿ, ನಾನು 2ನೇ ದೇವರಾಜ್ ಅರಸ್ ಅಂತ ಹೇಳಿಕೊಳ್ಳುವ ಸಿದ್ದರಾಮಯ್ಯ ಅವರು 1 ಲೀಟರ್ ಹಾಲಿಗೆ 9 ರೂ ಹಾಲಿನ ದರ ಏರಿಸಿದ್ದಾರೆ. ಇಡೀ ದೇಶದಲ್ಲಿ ಇಷ್ಟೊಂದು ಹಾಲಿನ ದರ ಏರಿಸಿದ ರಾಜ್ಯ ಕರ್ನಾಟಕ. ರಾಜ್ಯದಲ್ಲಿ ಬೆಲೆ ಏರಿಕೆಯ ಬಗ್ಗೆ ಸಾಕಷ್ಟು ದಾಳಿಯೇ ನಡೆಯುತ್ತಿದೆ. ಮೂರು ಬಾರಿ ಹಾಲಿದ ದರ ಏರಿಕೆ ಮಾಡಲಾಗಿದೆ. ಏರಿಸಿರುವ 4 ರೂ. ರೈತರಿಗೆ ಕೊಡುತ್ತೇವೆ ಎಂದು ಹೇಳಿ ಒಂದು ಪೈಸೆ ಕೂಡ ಕೊಟ್ಟಿಲ್ಲ‌ ಎಂದು ಆರೋಪಿಸಿದರು.

- Advertisement -


Must Read

Related Articles