ಪತ್ನಿಯನ್ನು ಕೊಂದು ಸೂಟ್ ಕೇಸ್ ನಲ್ಲಿ ತುಂಬಿದ್ದ ಪ್ರಕರಣ: ಕೊಲೆಗೆ ಕಾರಣ ಬಹಿರಂಗ

- Advertisement -

ಬೆಂಗಳೂರು: ಬೆಂಗಳೂರಿನ ಹುಳಿಮಾವು ಸಮೀಪದ ದೊಡ್ಡಕಮ್ಮನಹಳ್ಳಿಯ ಗೌರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ರಾಕೇಶ್ ​ನನ್ನು​ ಆರು ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

- Advertisement -

ಪತ್ನಿ ಗೌರಿಯನ್ನು ಕೊಲೆ ಮಾಡಿ, ಶವವನ್ನು ಸೂಟ್ ​ಕೇಸ್ ​ನಲ್ಲಿ ತುಂಬಿ ಪರಾರಿಯಾಗಲು ಯತ್ನಿಸಿದ್ದ ಪತಿ ರಾಕೇಶ್​ ನನ್ನು ಬೆಂಗಳೂರು ಪೊಲೀಸರು ಪುಣೆಯಲ್ಲಿ ಬಂಧಿಸಿ ಕರೆತಂದಿದ್ದಾರೆ. ಆರೋಪಿ ರಾಕೇಶ್ ​ನನ್ನು 9ನೇ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.

ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಪ್ರಾಥಮಿಕ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಆರೋಪಿ ರಾಕೇಶ್​ ಹಲವು ವಿಚಾರಾಗಳನ್ನು ಪೊಲೀಸರ ಮುಂದೆ ಬಾಯಿಟ್ಟಿದ್ದಾನೆ. “ ಗೌರಿ ನಡವಳಿಕೆಯಿಂದ ಬೇಸತ್ತು ಕೊಲೆ ಮಾಡಿದ್ದಾಗಿ” ಹೇಳಿದ್ದಾನೆ.

- Advertisement -

“ಗೌರಿ ನನ್ನ ಕುಟುಂಬದ ಜೊತೆಗೆ ಹೊಂದಾಣಿಕೆ ಆಗಲಿಲ್ಲ. ಆಕೆ ಕುಟುಂಬದ ಒಳಗೆ ದಬ್ಬಾಳಿಕೆ ಮಾಡುತ್ತಿದ್ದಳು. ಕುಟುಂಬದ ಯಾವ ಸದಸ್ಯರ ಜೊತೆಗೆ ಹೊಂದಿಕೊಳ್ಳಲಿಲ್ಲಾ. ಬದಲಾಗಿ ಬೆಂಗಳೂರಿಗೆ ಹೋಗುವ, ಅಲ್ಲಿಯೇ ಇಬ್ಬರು ಕೆಲಸ ಮಾಡುವ ಎಂದು ಒತ್ತಾಯ ಮಾಡಿ ಇಲ್ಲಿಗೆ ಕರೆಸಿದಳು. ಒಂದು ತಿಂಗಳಾದರೂ ಆಕೆಗೆ ಕೆಲಸ ಸಿಗಲಿಲ್ಲ. ಕೆಲಸ ಹುಡುಕಲು ಆಕೆಗೆ ಸಹಾಯ ಮಾಡಿದರೂ ನೀನು ನನಗೆ ಕೆಲಸ ಹುಡುಕಲು ಸಹಾಯ ಮಾಡಿಲ್ಲ ಎಂದು ಪದೇ ಪದೇ ಗಲಾಟೆ ಮಾಡುತ್ತಿದ್ದಳು” ಎಂದು ಪತಿ, ಆರೋಪಿ ರಾಕೇಶ್​ ಹೇಳಿದ್ದಾನೆ.

ನಾನು ಮನೆಯಿಂದಲೇ ಕೆಲಸ ಮಾಡುತ್ತಿದ್ದ ಕಾರಣ ಗಲಾಟೆ ಮಾಡುತ್ತಿದ್ದಳು. ಆಕೆಯದ್ದೇ ನಡೆಯಬೇಕು ಎನ್ನುವ ರೀತಿಯಲ್ಲಿ ಇದ್ದಳು. ಆ ದಿನ (ಮಾ.26) ರಂದು ಸಹ ಇದೇ ವಿಚಾರಗಳುಗೆ ಜೋರು ಜಗಳಕ್ಕೆ ಕಾರಣವಾದವು. ಈ ವೇಳೆ ಆಕೆ ನನಗೆ ಚಾಕುವಿನಿಂದ ಹೊಡೆದಳು. ಬಳಿಕ ನಾನು ಚಾಕುವಿನಿಂದ ಆಕೆಯ ಕುತ್ತಿಗೆಗೆ ಚುಚ್ಚಿದೆ. ನಾನು ಸೆಲ್ಫ್ ಡಿಫೆನ್ಸ್ ​ಗಾಗಿ ಕೊಲೆ ಮಾಡಿದೆ. ನಂತರ ಕೃತ್ಯ ಮುಚ್ಚಿಹಾಕಲು ಬ್ಯಾಗ್​ ಗೆ ತುಂಬಿದೆ. ಆದರೆ, ಮೃತದೇಹ ಸಾಗಿಸುವುದು ಕಷ್ಟವಾದ ಕಾರಣ ಅಲ್ಲಿಯೇ ಬಿಟ್ಟು ಹೋದೆ ಎಂದು ಬಾಯಿಬಿಟ್ಟಿದ್ದಾನೆ.

ಘಟನೆಯ ಹಿನ್ನೆಲೆ….

ಟೆಕ್ಕಿ ರಾಕೇಶ್ ರಾಜೇಂದರ ಖೇಡೇಕರ್ ಮಹಾರಾಷ್ಟ್ರ ಮೂಲದ ಗೌರಿ ಖೇಡೇಕರ್‌ ನನ್ನು ಕೊಂದು ಮೃತದೇಹ ಗುರುವಾರ(ಮಾ.27)ರಂದು ಸೂಟ್‌ ಕೇಸ್‌ ನಲ್ಲಿಟ್ಟು ಪುಣೆಗೆ ಪರಾರಿಯಾಗಿದ್ದ. ಆ ನಂತರ ಪತ್ನಿ ಕೊಂದ ಪಶ್ಚಾತಾಪದಲ್ಲಿ ಜಿರಳೆ ಔಷಧ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಕರ್ನಾಟಕ ಮಹಾರಾಷ್ಟ್ರ ಬಾರ್ಡರ್ ನಲ್ಲಿದ್ದ ರಾಕೇಶ್‌ ನನ್ನು ಬೈಕ್ ಸವಾರನೊಬ್ಬ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಪುಣೆ ಪೊಲೀಸರು ಬಂಧಿಸಿದ್ದರು.

ಪತ್ನಿ ಕೊಂದು ತಂದೆಗೆ ಕರೆ ಮಾಡಿದ್ದ ರಾಕೇಶ್‌, ಶವದ ಕಾಲುಗಳನ್ನ ಮುರಿದು ಶವವನ್ನ ಟ್ರ್ಯಾಲಿ ಬ್ಯಾಗ್‌ ಗೆ ತುಂಬಿದ್ದ. ಅದೇ ಬ್ಯಾಗ್‌ ನನ್ನ ಎಳೆಯುವಾಗ ಹ್ಯಾಂಡಲ್‌ ಕಟ್ ಆಗಿದೆ. ಹೀಗಾಗಿ ಶವವನ್ನ ಅಲ್ಲೇ ಬಿಟ್ಟು ಕಾರ್‌ ನಲ್ಲಿ ಎಸ್ಕೇಪ್ ಆಗಿದ್ದ. ಮಾರ್ಚ್‌ 27ರಂದು ಮಧ್ಯಾಹ್ನ ಗೌರಿ ಅಣ್ಣ ಗಣೇಶ್‌ ಗೆ ಕರೆ ಮಾಡಿ, ನಿನ್ನ ತಂಗಿಯನ್ನು ಕೊಂದಿದ್ದೇನೆ, ನಾನು ಸಾಯುತ್ತಿದ್ದೇನೆಂದು ಹೇಳಿದ್ದ. ಅಷ್ಟೇ ಅಲ್ಲದೆ ತನ್ನ ತಂದೆಗೂ ಕರೆಮಾಡಿದ್ದ. ಅವಳು ನನ್ನ ಜೊತೆ ಜಗಳ ಮಾಡುತ್ತಿದ್ದಳು, ಕೆಲಸಕ್ಕೆ ಹೋಗು ಎಂದು ಪೀಡಿಸುತ್ತಿದ್ದಳು ಅದಕ್ಕೆ ಕೊಲೆ ಮಾಡಿದೆ ಎಂದು ಆರೋಪಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದ ಗೌರಿ-ರಾಕೇಶ್‌
ಮಹಾರಾಷ್ಟ್ರ ಮೂಲದ ರಾಕೇಶ್, ಗೌರಿ ಅನಿಲ್ ಸಾಂಬೆಕರ್, ಎರಡು ವರ್ಷದ ಹಿಂದಷ್ಟೆ ಮದುವೆ ಆಗಿದ್ದರು. ಬದುಕು ಸಾಗಿಸಲು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ರು, ಪತಿ ರಾಕೇಶ್ ಸಾಫ್ಟ್ ವೇರ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ. ಪತ್ನಿ ಗೌರಿ, ಮನೆಯಲ್ಲೇ ಇದ್ದು ಕೆಲಸವನ್ನು ಹುಡುಕುತ್ತಿದ್ದಳು. 1 ತಿಂಗಳ ಹಿಂದಷ್ಟೇ ಹುಳಿಮಾವು ಠಾಣಾ ವ್ಯಾಪ್ತಿಯ ದೊಡ್ಡ ಕಮ್ಮನಹಳ್ಳಿಯ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದರು. ಪತಿ ರಾಕೇಶ್ ವರ್ಕ್ ಫ್ರಮ್ ಹೋಮ್ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

- Advertisement -


Must Read

Related Articles