ಮುಂಬೈ: ಇಲ್ಲಿನ ಚೆಂಬೂರ್ ಪ್ರದೇಶದಲ್ಲಿ ಧ್ವನಿವರ್ಧಕ ವಿವಾದಕ್ಕೆ ಸಂಬಂಧಿಸಿದಂತೆ ಪಕ್ಷದ ಮುಖ್ಯಸ್ಥ ರಾಜ್ ಠಾಕ್ರೆ ಅವರ ಪತ್ರವನ್ನು ವಿತರಿಸುತ್ತಿದ್ದ ಎಂಟು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಕಾರ್ಯಕರ್ತರನ್ನು ಮುಂಬೈ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
‘ಆಝಾನ್’ ಗಾಗಿ ಧ್ವನಿವರ್ಧಕಗಳನ್ನು ಬಳಸುವ ಪ್ರದೇಶಗಳಲ್ಲಿ ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾ ನುಡಿಸುವಂತೆ ಜನರಿಗೆ ಮನವಿ ಮಾಡಿದಕ್ಕಾಗಿ ರಾಜ್ ಠಾಕ್ರೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನಗರದಲ್ಲಿ ಧ್ವನಿವರ್ಧಕಗಳಿಗೆ ಅನುಮತಿಸಬಹುದಾದ ಡೆಸಿಬಲ್ ಮಿತಿಗಳನ್ನು ಉಲ್ಲಂಘಿಸಿದರೆ ಸ್ಥಳೀಯ ಪೊಲೀಸರಿಗೆ ವರದಿ ಮಾಡುವಂತೆ ಪತ್ರದಲ್ಲಿ ರಾಜ್ ಠಾಕ್ರೆ ಜನರನ್ನು ಒತ್ತಾಯಿಸಿದ್ದರು.
ಮೇ 3 ರೊಳಗೆ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಠಾಕ್ರೆ ಏಪ್ರಿಲ್ 12 ರಂದು ಮಹಾರಾಷ್ಟ್ರ ಸರ್ಕಾರಕ್ಕೆ ಅಂತಿಮ ಗಡುವು ನೀಡಿದ ನಂತರ ವಿವಾದವು ಪ್ರಾರಂಭವಾಯಿತು. ಎಂಎನ್ ಎಸ್ ಕಾರ್ಯಕರ್ತರು ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾ ನುಡಿಸುತ್ತಾರೆ ಎಂದು ಅವರು ಎಚ್ಚರಿಸಿದ್ದರು.