Home ಟಾಪ್ ಸುದ್ದಿಗಳು ಸಚಿನ್ ವೇಝ್ ಬಂಧನ | 18 ವರ್ಷಗಳಿಂದ ‘ಕಣ್ಮರೆ’ಯಾಗಿರುವ ಮಗನಿಗೆ ನ್ಯಾಯ ಬಯಸುತ್ತಿರುವ 73 ವರ್ಷದ...

ಸಚಿನ್ ವೇಝ್ ಬಂಧನ | 18 ವರ್ಷಗಳಿಂದ ‘ಕಣ್ಮರೆ’ಯಾಗಿರುವ ಮಗನಿಗೆ ನ್ಯಾಯ ಬಯಸುತ್ತಿರುವ 73 ವರ್ಷದ ಆಸಿಯಾ ಬೇಗಂ !

►ಸ್ಫೋಟದ ಆರೋಪಿಯೆಂದು ಬಂಧನ, ಕಣ್ಮರೆ!

ಅಂಬಾನಿ ಮನೆ ಮುಂಭಾಗದಲ್ಲಿ ವಾಹಣವೊಂದರಲ್ಲಿ ಜಿಲೇಟಿನ್ ಪತ್ತೆಯಾದ ಪ್ರಕರಣದಲ್ಲಿ ಮತ್ತು ಹಿರಾನಿ ಅವರ ಸಾವಿಗೆ ಸಂಬಂಧಿಸಿದಂತೆ NIA ತಂಡವು ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವೇಝ್ ಅವರನ್ನು ಬಂಧನವು ತನಗೆ  ಕಾವ್ಯಾತ್ಮಕವಾದ ನ್ಯಾಯ ದೊರಕಿದಂತಾಗಿದೆ ಎಂದು ಮುಂಬೈನ ಆಸಿಯಾ ಬೇಗಂ ತಿಳಿಸಿದ್ದಾರೆ.

2003 ರಲ್ಲಿ ಬಾಂಬ್ ಸ್ಫೋಟದ ಶಂಕಿತ ಆರೋಪಿಯೆಂದು ಬಂಧಿಸಲ್ಪಟ್ಟು ಆ ಬಳಿಕ ಕಣ್ಮರೆಯಾಗಿದ್ದಾರೆಂದು ಪೊಲೀಸ್ ಹೇಳಿಕೆಯ ಖ್ವಾಜಾ ಯೂನುಸ್ ನ 73 ವರ್ಷದ ತಾಯಿ ಆಸಿಯಾ ಬೇಗಂ, ತನ್ನ ಮಗನ ಕಣ್ಮರೆ ಅಥವಾ ಎನ್ಕೌಂಟರ್ ಹಿಂದಿರುವ  ಅಧಿಕಾರಿಗಳ ವಿರುದ್ಧ ವರ್ಷಗಳವರೆಗೆ ಹೋರಾಟ ಮಾಡುತ್ತಿದ್ದಾರೆ. “ನನ್ನ ಮಗನ ಹತ್ಯೆಯ ನಂತರ ನ್ಯಾಯಕ್ಕಾಗಿ ಹೋರಾಡುತ್ತಿದ್ದ ನನಗೆ ಸಚಿನ್ ವೇಝ್ ಬಂಧನವು ಸುರಂಗದ ಕೊನೆಯಲ್ಲಿ ಯಾವಾಗಲೂ ಬೆಳಕು ಇರುತ್ತದೆ ಎಂದು ತೋರಿಸಿದೆ ಎಂದು ಹೇಳಿದ್ದಾರೆ. ವೇಝ್ ವಿರುದ್ಧ ಹೋರಾಡಲು ನಾನು ಶಕ್ತಳಾಗಿರಲಿಲ್ಲ. ಆದರೆ ಈಗ ದೂರದ ಆಸೆ ಚಿಗುರಿದೆ ಎನ್ನುತ್ತಾರೆ ಅವರು.

“ಸರ್ವಶಕ್ತನ ಮೇಲಿನ ನಮ್ಮ ನಂಬಿಕೆಯಿದ ನ್ಯಾಯ ವಿಳಂಬವಾಗಿದೆ ಹೊರತು ನಿರಾಕರಿಸಲ್ಪಟ್ಟಿಲ್ಲಎಂಬುವುದು ಸ್ಪಷ್ಟವಾಗಿದೆ. ನನ್ನ ಮಗನ ಕೊಲೆ ಪ್ರಕರಣದಲ್ಲಿ ವಿಚಾರಣೆಯನ್ನು ಪ್ರಾರಂಭಿಸಿದಾಗ, ವೇಝ್ ತಮ್ಮ ಅಧಿಕಾರ ಬಲದಿಂದ ನ್ಯಾಯಾಂಗ ಪ್ರಕ್ರಿಯೆಯನ್ನು ಇಷ್ಟು ವರ್ಷಗಳ ಕಾಲ ವಿಳಂಬಗೊಳಿಸುವಲ್ಲಿ ಯಶಸ್ವಿಯಾದರು ”ಎಂದು ಆಸಿಯಾ ಬೇಗಂ ಮಾಧ್ಯಮಗಳೊಂದಿಗೆ ಹೇಳಿದರು.

ಬೇಗಂ ಈಗ ತನ್ನ ಹಿರಿಯ ಮಗನೊಂದಿಗೆ ಪರ್ಭಾನಿಯಲ್ಲಿ ವಾಸಿಸುತ್ತಿದ್ದಾರೆ. ಅವರ ಮಗನ ಹತ್ಯೆ ಪ್ರಕರಣದ ವಿಚಾರಣೆ ಇನ್ನೂ ನ್ಯಾಯಾಲಯದಲ್ಲಿ ಇತ್ಯರ್ಥವಾಗಿಲ್ಲ. ಭಾನುವಾರದ ಬೆಳವಣಿಗೆಗಳು ವೇಝ್ ವಿರುದ್ಧದ ಎಲ್ಲಾ  ಕ್ರಿಮಿನಲ್ ಪ್ರಕರಣದ ಮರುಪರಿಶೀಲನೆಗೆ ಕಾರಣವಾಗಬಹುದೆಂದು ಆಸಿಯಾ ಬೇಗಂ ಬಯಸುತ್ತಿದ್ದಾರೆ.

Join Whatsapp
Exit mobile version