Home ಟಾಪ್ ಸುದ್ದಿಗಳು ನ್ಯೂಯಾರ್ಕ್ ಚಂಡಮಾರುತಕ್ಕೆ 7 ಮಂದಿ ಬಲಿ

ನ್ಯೂಯಾರ್ಕ್ ಚಂಡಮಾರುತಕ್ಕೆ 7 ಮಂದಿ ಬಲಿ

NEW YORK, NY - SEPTEMBER 01: Rainfall from Hurricane Ida flood the basement of a Kennedy Fried Chicken fast food restaurant on September 1, 2021, in the Bronx borough of New York City. The once category 4 hurricane passed through New York City, dumping 3.15 inches of rain in the span of an hour at Central Park. David Dee Delgado/Getty Images/AFP (Photo by David Dee Delgado / GETTY IMAGES NORTH AMERICA / Getty Images via AFP)

ನ್ಯೂಯಾರ್ಕ್: ನ್ಯೂಯಾರ್ಕ್ ನಗರದಲ್ಲಿ ಉಂಟಾದ ಚಂಡಮಾರುತ ಇಂದು ಮುಂಜಾನೆ ಭೀಕರ ಸ್ಪರೂಪವನ್ನು ಪಡೆದುಕೊಂಡು 7 ಮಂದಿಯನ್ನು ಬಲಿಪಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕಳೆದ ಭಾನುವಾರದಿಂದ ವೇಗವಾಗಿ ಬೀಸುತ್ತಿರುವ ಗಾಳಿ ಮತ್ತು ಮಳೆಯು ಬುಧವಾರ ತಡರಾತ್ರಿ ಮತ್ತು ಗುರುವಾರ ತೀವ್ರ ಸ್ವರೂಪವನ್ನು ಪಡೆದುಕೊಂಡು ಭೀಕರ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ಪ್ರಾಧಿಕಾರ ತುರ್ತುಪರಿಸ್ಥಿತಿಯನ್ನು ಘೋಷಿಸಿತ್ತು.

ನ್ಯೂಯಾರ್ಕ್ ಮತ್ತು ಈಶಾನ್ಯ ಅಮೆರಿಕದಲ್ಲಿ ಉಂಟಾಗಿರುವ ಚಂಡಮಾರುತ ಮತ್ತು ಪ್ರವಾಹವನ್ನು ನಿರ್ವಹಣೆ ಮಾಡುವುದರಲ್ಲಿ ಕ್ರಮ ಜರುಗಿಸಲಾಗುವುದೆಂದು ಗವರ್ನರ್ ಕ್ಯಾತಿ ಹೋಚುಲ್ ಮತ್ತು ಮೇಯರ್ ಬಿಲ್ ಡಿ ಬ್ಲಾಸಿಯೊ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version