Home ಟಾಪ್ ಸುದ್ದಿಗಳು ಅಬುಧಾಬಿಯ ದೇವಾಲಯಕ್ಕೆ ಮೊದಲ ದಿನ 65,000 ಜನರ ಭೇಟಿ

ಅಬುಧಾಬಿಯ ದೇವಾಲಯಕ್ಕೆ ಮೊದಲ ದಿನ 65,000 ಜನರ ಭೇಟಿ

ಅಬುಧಾಬಿ: ಇಲ್ಲಿ ಇತ್ತೀಚೆಗೆ ಉದ್ಘಾಟಿಸಲಾದ ಬಿಎಪಿಎಸ್ ಹಿಂದೂ ಮಂದಿರವು ಭಾನುವಾರದಿಂದ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಿದ್ದು, ಮೊದಲ ದಿನ 65,000 ಹೆಚ್ಚು ಮಂದಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಅಬುಧಾಬಿಯ ಭಕ್ತ ಸುಮಂತ್ ರಾಯ್ ಎಂಬವರು ಮಾತನಾಡಿ, ಸಾವಿರಾರು ಜನರ ನಡುವೆ ಇಂತಹ ಅದ್ಭುತ ಕ್ರಮವನ್ನು ನಾನು ಎಂದಿಗೂ ನೋಡಿಲ್ಲ. ದೇವರ ದರ್ಶನ ಮಾಡಲು ನಾನು ಗಂಟೆಗಟ್ಟಲೆ ಕಾಯಬೇಕಾಗುತ್ತದೆ ಮತ್ತು ಶಾಂತಿಯುತವಾಗಿ ದರ್ಶನ ಮಾಡಲು ಸಾಧ್ಯವಾಗುವುದಿಲ್ಲ ಎಂದು ನಾನು ಚಿಂತಿತನಾಗಿದ್ದೆ,. ಆದರೆ ನಾವು ಬಹಳ ಸುಲಭವಾಗಿ ಅದ್ಭುತ ದರ್ಶನವನ್ನು ಪಡೆದಿದ್ದೇವೆ. ಬಹಳ ಸಂತೋಷವಾಗಿದೆ, ಬಿಎಪಿಎಸ್ ಸ್ವಯಂಸೇವಕರು ಮತ್ತು ಮಂದಿರ ಸಿಬ್ಬಂದಿಗೆ ಹ್ಯಾಟ್ಸ್ ಆಫ್ ಎಂದು ಹೇಳಿದ್ದಾರೆ.

ದೇವಾಲಯಕ್ಕೆ ಭೇಟಿ ನೀಡಿದ ಅನೇಕ ಭಕ್ತರು ಮಂದಿರದ ಸಂಕೀರ್ಣ ವಾಸ್ತುಶಿಲ್ಪವನ್ನು ನೋಡಿ ವಿಸ್ಮಯಗೊಂಡರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Join Whatsapp
Exit mobile version