ಮುಂಬೈ: ಸಿಬಿಐನ ಮಾಜಿ ವಿಶೇಷ ನ್ಯಾಯಾಧೀಶ ಶಿವಪಾಲ್ ಸಿಂಗ್ (59) ತನಗಿಂತ ಒಂಬತ್ತು ವರ್ಷ ಚಿಕ್ಕ ವಕೀಲೆ ಹಾಗೂ ಬಿಜೆಪಿ ನಾಯಕಿಯನ್ನು ಮದುವೆಯಾಗಿದ್ದಾರೆ.
ಗೊಡ್ಡಾ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿರುವ ನೂತನ್ ತಿವಾರಿ (50) ಅವರನ್ನು ಶಿವಪಾಲ್ ಸಿಂಗ್ ವಿವಾಹವಾಗಿದ್ದಾರೆ.
ಮಾಜಿ ನ್ಯಾಯಾಧೀಶರ ವಿವಾಹವು ಬಿಹಾರ ಮತ್ತು ಜಾರ್ಖಂಡ್ ನಲ್ಲಿ ಚರ್ಚೆಗೆ ಕಾರಣವಾಗಿದೆ.
ವರದಿಗಳ ಪ್ರಕಾರ, ಶಿವಪಾಲ್ ಸಿಂಗ್ ಅವರು ಬಿಹಾರದ ಮಾಜಿ ಸಿಎಂ ಮತ್ತು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ಎರಡು ಮೇವು ಹಗರಣ ಪ್ರಕರಣಗಳಲ್ಲಿ ದೋಷಿ ಎಂದು ತೀರ್ಪು ನೀಡಿ ಜೈಲು ವಿಧಿಸಿದ್ದರು ಎಂದು ತಿಳಿದು ಬಂದಿದೆ.