Home ಟಾಪ್ ಸುದ್ದಿಗಳು ವಿಶೇಷ ಕಾರ್ಯಕ್ರಮಗಳ ಜಾಹೀರಾತಿಗೆ 57.02 ಲಕ್ಷ ರೂ.ವೆಚ್ಚ ಮಾಡಿದ ರಾಜ್ಯ ಸರ್ಕಾರ

ವಿಶೇಷ ಕಾರ್ಯಕ್ರಮಗಳ ಜಾಹೀರಾತಿಗೆ 57.02 ಲಕ್ಷ ರೂ.ವೆಚ್ಚ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ಜನ ಸಾಮಾನ್ಯರ ಕಲ್ಯಾಣಕ್ಕಾಗಿ ರೂಪಿಸಿದ ಯೋಜನೆಗಳ ಸಮಗ್ರ ಚಿತ್ರಣವನ್ನೊಳಗೊಂಡ ಮತ್ತು ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿದ್ದ ಕ್ರಮಗಳ ಕುರಿತು 15 ರಿಂದ 30 ನಿಮಿಷದ ಕಾರ್ಯಕ್ರಮ ಪ್ರಸಾರ ಮಾಡಿರುವ ಟಿ ವಿ ಚಾನಲ್ ಗಳಿಗೆ ರಾಜ್ಯ ಬಿಜೆಪಿ ಸರ್ಕಾರವು 57. 02 ಲಕ್ಷ ರೂ. ಪಾವತಿಸಿದೆ.


15 ರಿಂದ 30 ನಿಮಿಷ ಅವಧಿಯ ಕಾರ್ಯಕ್ರಮಗಳು ಸುದ್ದಿವಾಹಿನಿಗಳಲ್ಲಿ 2000ರ ಜುಲೈ 24 ರಿಂದ ಪ್ರಸಾರವಾಗಿದ್ದವು. ಸಾಮಾನ್ಯವಾಗಿ ವಿಶೇಷ ಕಾರ್ಯಕ್ರಮಗಳು ಸುದ್ದಿವಾಹಿನಿಗಳ ದೈನಂದಿನ ಕಾರ್ಯಕ್ರಮದ ಭಾಗವಾಗಿರುತ್ತದೆ.
ಆದರಲ್ಲಿ ಬಿಜೆಪಿ ಸರ್ಕಾರವು ತನ್ನ ವರ್ಚಸ್ಸು ವೃದ್ಧಿಸಲು ವಿಶೇಷ ಕಾರ್ಯಕ್ರಮಗಳಿಗೆ ಜಾಹೀರಾತು ರೂಪದಲ್ಲಿ ಲಕ್ಷಾಂತರ ರೂ. ವೆಚ್ಚ ಮಾಡಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.


ವೆಚ್ಚದ ವಿವರ ( ಟಿವಿ ಚಾನಲ್ ವಾರು )
ಟಿ ವಿ 9 ಕನ್ನಡ ( ಪ್ರತಿ ಸೆಕೆಂಡಿಗೆ 4,400 ) 7,92, 000 ರೂ.
ಸುವರ್ಣ ನ್ಯೂಸ್ (2,100 ) 7,56, 000 ರೂ.
ಪಬ್ಲಿಕ್ ಟಿ ವಿ (3,250 ) 5, 85, 000 ರೂ.
ನ್ಯೂಸ್ 18 (2,300) 4, 14, 000 ರೂ.
ಬಿ ಟಿ ವಿ ನ್ಯೂಸ್ (2,000) 5,40, 000 ರೂ.
ಪ್ರಜಾ ಟಿ ವಿ (1,600)- 2, 88, 000 ರೂ.
ಕಸ್ತೂರಿ ನ್ಯೂಸ್ (1,600)- 2, 88, 000 ರು.
ರಾಜ್ ನ್ಯೂಸ್ (1,500) 2, 70, 000 ರೂ.
ದಿಗ್ವಿಜಯ ಟಿ ವಿ (2,000) 3, 60, 000 ರೂ.
ಟಿ ವಿ 5 ಕನ್ನಡ (1,500) 2, 70, 000 ರೂ.
ಪವರ್ ಟಿ ವಿ (1,500 ) 2, 70, 000 ರೂ.


ಜಿ ಎಸ್ ಟಿ ಸೇರಿದಂತೆ ಒಟ್ಟು ಈ ಎಲ್ಲಾ ಸುದ್ದಿ ವಾಹಿನಿಗಳಿಗೆ ಒಟ್ಟು 57.02 ಲಕ್ಷ ರೂ. ವೆಚ್ಚ ಮಾಡಿರುವುದು ತಿಳಿದು ಬಂದಿದೆ. ರಾಜ್ಯ ಬಿಜೆಪಿ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬಕ್ಕೆ ಪತ್ರಿಕೆಗಳ ಪ್ರಾಯೋಜಿತ ಪುರವಣಿಗಳಿಗೆ 44. 85 ಲಕ್ಷ ರೂ. ಗಳನ್ನು ವೆಚ್ಚ ಮಾಡಿದ್ದನ್ನು ಸ್ಮರಿಸಬಹುದು.


ಅತಿಥಿ ಉಪನ್ಯಾಸಕರಿಗೆ ಗೌರವ ಸಂಭಾವನೆ, ಆಟೋ ಚಾಲಕರು, ತಲಕಾರಿ, ಹೂ ಬೆಳೆಗಾರರು, ನೇಕಾರರು, ಸವಿತಾ ಸಮಾಜ, ಮನೆ ಕಟ್ಟಡ ಕಾರ್ಮಿಕರು ಸೇರಿದಂತೆ ಇನ್ನಿತರರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡದ ಸರ್ಕಾರ ಅಮಿತ್ ಶಾ ಕಾರ್ಯಕ್ರಮಗಳ ಜಾಹೀರಾತಿಗೆ 89 ಲಕ್ಷ ರೂ. ಖರ್ಚು ಮಾಡಿತ್ತು.


ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಹಮ್ಮಿಕೊಂಡಿರುವ ಯೋಜನೆ, ಕಾರ್ಯಕ್ರಮಗಳ ಸಮಗ್ರ ಚಿತ್ರಣವನ್ನು ಬಿಂಬಿಸುವ ನಾಲ್ಕು ಪುಟಗಳ ಪ್ರಾಯೋಜಿತ ಪುರವಣಿಗಾಗಿ 2020 ರಲ್ಲಿ ಒಟ್ಟು 1.60 ಕೋಟಿ ರು. ಗಳನ್ನು ವೆಚ್ಚ ಮಾಡಿದೆ. ಈ ಪೈಕಿ ಹೊಸದಿಂಗತ ಪತ್ರಿಕೆ ಸಿಂಹಪಾಲು ಪಡೆದದ್ದು, ಉಳಿದೆಲ್ಲ ಪತ್ರಿಕೆಗಳಿಗಿಂತ ಅತಿ ಹೆಚ್ಚಿನ ಮೊತ್ತದ ಜಾಹೀರಾತು ನೀಡಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
(ಕೃಪೆ: ದಿ ಫೈಲ್)

Join Whatsapp
Exit mobile version