Home ಟಾಪ್ ಸುದ್ದಿಗಳು ಕಾಣಿಯೂರು ಹಲ್ಲೆ ಘಟನೆ ಖಂಡಿಸಿ ನಡೆಯುವ ಪ್ರತಿಭಟನೆಯಲ್ಲಿ 5000 ಜನ ಭಾಗಿ ನಿರೀಕ್ಷೆ: ಅಶ್ರಫ್ ಕಲ್ಲೇಗ

ಕಾಣಿಯೂರು ಹಲ್ಲೆ ಘಟನೆ ಖಂಡಿಸಿ ನಡೆಯುವ ಪ್ರತಿಭಟನೆಯಲ್ಲಿ 5000 ಜನ ಭಾಗಿ ನಿರೀಕ್ಷೆ: ಅಶ್ರಫ್ ಕಲ್ಲೇಗ

ಪುತ್ತೂರು: ಕಾಣಿಯೂರು ಹಲ್ಲೆ ಘಟನೆ ಖಂಡಿಸಿ ಹಮ್ಮಿಕೊಂಡಿರುವ ಪ್ರತಿಭಟನೆಗೆ 5000 ಜನ ಸೇರುವ ನಿರೀಕ್ಷೆಯಿದೆ ಎಂದು ಮುಸ್ಲಿಮ್ ಯುವಜನ ಪರಿಷತ್, ಪುತ್ತೂರು ಇದರ ಅಧ್ಯಕ್ಷ ಹಾಜಿ ಅಶ್ರಫ್ ಕಲ್ಲೇಗ ಹೇಳಿದ್ದಾರೆ.

ಇತ್ತೀಚೆಗೆ ಕಾಣಿಯೂರಿನಲ್ಲಿ ಇಬ್ಬರು ಮುಸ್ಲಿಮ್ ವ್ಯಾಪಾರಿಗಳ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಹಾಗೂ ಕೊಲೆಯತ್ನವನ್ನು ಖಂಡಿಸಿ ದ.ಕ ಜಿಲ್ಲಾ ಮುಸ್ಲಿಂ ಯುವ ಜನ ಪರಿಷತ್ ಅಕ್ಟೋಬರ್ 28ರಂದು ಪುತ್ತೂರಿನಲ್ಲಿ ಬೃಹತ್ ಜಾಥಾ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಈ ಬೃಹತ್ ಪ್ರತಿಭಟನೆಗೆ ಅನುಮತಿ ಲಭಿಸಿದ್ದು, ಸರ್ವರೂ ಒಗ್ಗಟ್ಟಾಗಿ ಈ ಪ್ರತಿಭಟನೆಗೆ ಭಾಗಹಿಸುವ ಮೂಲಕ ಯಶಸ್ವಿಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.

Join Whatsapp
Exit mobile version