Home ಟಾಪ್ ಸುದ್ದಿಗಳು ದಂಡ ಕಟ್ಟುವವರಿಗೆ ಶೇಕಡಾ 50ರಷ್ಟು ರಿಯಾಯಿತಿ ಘೋಷಿಸಿದ ಸಾರಿಗೆ ಇಲಾಖೆ; ಅಂತಿಮ ದಿನಾಂಕ ಇಲ್ಲಿದೆ

ದಂಡ ಕಟ್ಟುವವರಿಗೆ ಶೇಕಡಾ 50ರಷ್ಟು ರಿಯಾಯಿತಿ ಘೋಷಿಸಿದ ಸಾರಿಗೆ ಇಲಾಖೆ; ಅಂತಿಮ ದಿನಾಂಕ ಇಲ್ಲಿದೆ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಕಟ್ಟಲು ಬಾಕಿ ಇರುವವರು ಮತ್ತು ಪ್ರಕರಣ ಕೋರ್ಟ್​ನಲ್ಲಿ ಇದ್ದರೆ ಅಂತಹವರಿಗೆ ಸಾರಿಗೆ ಇಲಾಖೆ ಶೇಕಡಾ 50ರಷ್ಟು ರಿಯಾಯಿತಿ ನೀಡಿದೆ.

ಫೆಬ್ರವರಿ 11ರ ಒಳಗಾಗಿ ದಂಡ ಕಟ್ಟುವವರಿಗೆ ಶೇಕಡಾ 50ರಷ್ಟು ರಿಯಾಯಿತಿ ನೀಡಿ ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಫೆ.11 ರ ಒಳಗಾಗಿ ಫೈನ್ ಕಟ್ಟುವವರು ಕಟ್ಟಬಹುದಾಗಿದೆ. ಫೆಬ್ರವರಿ 11ರ ನಂತರ ಸಂಪೂರ್ಣ ದಂಡದ ಮೊತ್ತ ಪಾವತಿಸಬೇಕು.

ಫೆಬ್ರವರಿ 11ರಂದು ಲೋಕ ಅದಾಲತ್ ನಡೆಯಲಿರುವ ಹಿನ್ನಲೆ ದಂಡ ಪಾವತಿಯಲ್ಲಿ ರಿಯಾಯಿತಿ ನೀಡುವಂತೆ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ.ವೀರಪ್ಪ ಅವರು ಮನವಿ ಮಾಡಿದ್ದರು.

Join Whatsapp
Exit mobile version