ಬೆಂಗಳೂರು ರಾಷ್ಟ್ರೀಯ ವೈದ್ಯಕೀಯ ಪರಿಷತ್ತು (ಎನ್‌ಎಂಸಿ) 2024-25ನೇ ಸಾಲಿಗೆ ರಾಜ್ಯಕ್ಕೆ 5 ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನೀಡಿದೆ.
ರಾಮನಗರ ಜಿಲ್ಲೆಯೊಂದಕ್ಕೆನೇ ಎರಡು ವೈದ್ಯಕೀಯ ಕಾಲೇಜುಗಳಿಗೆ ಒಟ್ಟೊಟ್ಟಿಗೆ ಅನುಮತಿ ದೊರೆತಿರುವುದು ವಿಶೇಷವಾಗಿದೆ.
ಕನಕಪುರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಆಸ್ಪತ್ರೆ ರಾಮನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಪಿಇಎಸ್ ವೈದ್ಯಕೀಯ ವಿಜ್ಞಾನಗಳ ಮತ್ತು ಸಂಶೋಧನಾ ಸಂಸ್ಥೆ ಬೆಂಗಳೂರು, ಎಸ್.ಆರ್.ಪಾಟೀಲ್ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಬಾಗಲಕೋಟೆ. ಬಿಜಿಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ದಾಸನಪುರ- ನೆಲಮಂಗಲ ಸೇರಿ 5 ಕಾಲೇಜುಗಳಿಗೆ ಅನುಮತಿ ದೊರೆತಿದೆ.
ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಈ ಬಾರಿ 4 ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ಕೋರಿ ಎನ್‌ಎಂಸಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ನಾಲ್ಕು ಮತ್ತು ಖಾಸಗಿ ಸಂಸ್ಥೆಯಾದ ಪಿಇಎಸ್ ಪ್ರಸ್ತಾವನೆಗೂ ಅನುಮತಿ ದೊರೆತಿರುವುದು ರಾಜ್ಯಕ್ಕೆ ಹೆಚ್ಚಿನ ಸೀಟುಗಳು ದೊರೆಯಲು ಸಹಾಯವಾಗಿದೆ.