Home ಟಾಪ್ ಸುದ್ದಿಗಳು ದೆಹಲಿಯಲ್ಲಿ ದಟ್ಟ ಮಂಜಿನ ಹೊದಿಕೆ: 45 ರೈಲುಗಳು ವಿಳಂಬ

ದೆಹಲಿಯಲ್ಲಿ ದಟ್ಟ ಮಂಜಿನ ಹೊದಿಕೆ: 45 ರೈಲುಗಳು ವಿಳಂಬ

ನವದೆಹಲಿ: ದೆಹಲಿಯಲ್ಲಿ ಶನಿವಾರವೂ ದಟ್ಟ ಮಂಜಿನ ಪರದೆ ಆವರಿಸಿದ್ದು, ಕಡಿಮೆ ಗೋಚರತೆ ಸಮಸ್ಯೆಯಿಂದಾಗಿ ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾದವು.

ದಟ್ಟ ಮಂಜಿನಿಂದಾಗಿ ಸುಮಾರು 45 ರೈಲುಗಳ ಓಡಾಟದಲ್ಲಿ ತಡವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಸಫ್ದರ್‌ಜಂಗ್‌ನಲ್ಲಿ ಮಧ್ಯರಾತ್ರಿ 12.30ರಿಂದ 1.30ರ ನಡುವೆ ಕನಿಷ್ಠ ಗೋಚರತೆ 50 ಮೀಟರ್‌ ಇತ್ತು. ಬಳಿಕ ಅದು 200 ಮೀಟರ್‌ಗೆ ಏರಿಕೆಯಾಯಿತು. ಬೆಳಿಗ್ಗೆ 7.30ವರೆಗೆ ಅದೇ ಪರಿಸ್ಥಿತಿ ಇತ್ತು ಎಂದು ಅವರು ತಿಳಿಸಿದ್ದಾರೆ.

ಬೆಳಿಗ್ಗೆ ಹಲವು ಪ್ರದೇಶಗಳಲ್ಲಿ ದಟ್ಟ ಮಂಜು ಆವರಿಸಿಕೊಂಡಿತ್ತು. ತಾಪಮಾನ 7.7 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ.

Join Whatsapp
Exit mobile version