ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವೈಟ್‌ಫೀಲ್ಡ್‌ನಲ್ಲಿ ಕಾನೂನು ಬಾಹಿರ ಕಟ್ಟಡಗಳ ಸಮೀಕ್ಷೆಯ ನಡೆಸಲಾಗಿದ್ದು, ಒಂದೇ ಬಡಾವಣೆಯಲ್ಲಿ 40 ಅಕ್ರಮ ಕಟ್ಟಡಗಳು ಪತ್ತೆಯಾಗಿವೆ.
ಅಧಿಕಾರಿಗಳು ವೈಟ್ ರೋಸ್ ಬಡಾವಣೆಯಲ್ಲಿ ಅನೇಕ ಕಟ್ಟಡಗಳ (ಕೆಂಪು ಬಣ್ಣ ಬಳಿದ) ನಕ್ಷೆ ಮಂಜೂರಾತಿಯನ್ನು ನೀಡುವಂತೆ ಮಾಲೀಕರನ್ನು ಕೇಳಲಾಯಿತು. ಈ ವೇಳೆ ಒಟ್ಟು 40 ಪಿಜಿ ಕಟ್ಟಡಗಳು ಅಕ್ರಮವಾಗಿ ಇರುವುದು ಪತ್ತೆ ಆಗಿದೆ.
ವೈಟ್‌ಫೀಲ್ಡ್ ನಿವಾಸಿಗಳು ಐಟ್ ರೋಸ್ ಬಡಾವಣೆ ಮತ್ತು ಇತರ ಬಡಾವಣೆಗಳನ್ನು ವಾಸಿಗಳು ಅಕ್ರಮ ಕಟ್ಟಡ ಸ್ಥಾಪನೆಗಳ ವಿರುದ್ಧ ಅನೇಕ ಬಾರಿ ದೂರು ನೀಡಿದ್ದರು. ಅದರ ಭಾಗವಾಗಿಯೇ ಇದೀಗ ಕ್ರಮ ಅಕ್ರಮ ಕಟ್ಟಡಗಳು ಪತ್ತೆ ಆಗಿವೆ. ಈ ಬಡಾವಣೆಯಲ್ಲಿರುವ ಅಕ್ರಮ ಕಟ್ಟಡಗಳಲ್ಲಿ ಅತಿಥಿ ವಸತಿ ಗೃಹ (PG)ಗಳು ಇವೆ.
ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳ ಹಾವಳಿ ನಿವಾರಣೆಗೆ ಸಮಗ್ರ ಯೋಜನೆ ರೂಪಿಸುವಂತೆ ರಾಜ್ಯ ಹೈಕೋರ್ಟ್ ಆದೇಶದ ಮೇರೆಗೆ ಬಿಬಿಎಂಪಿ ಸಮೀಕ್ಷೆ ಕೈಗೊಂಡಿದೆ.