Home Uncategorized ಕೊಡಗು: ಶಿರವಸ್ತ್ರ ಧರಿಸಿದ 32 ಕಾಲೇಜು ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಣೆ

ಕೊಡಗು: ಶಿರವಸ್ತ್ರ ಧರಿಸಿದ 32 ಕಾಲೇಜು ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಣೆ

ಮಡಿಕೇರಿ: ಶಿರವಸ್ತ್ರ ಧರಿಸಿ ಕಾಲೇಜಿಗೆ ಬಂದ 32 ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶ ನಿರಾಕರಿಸಿರುವ ಘಟನೆ ನೆಲ್ಯಹುದಿಕೇರಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.

ಪ್ರಥಮ ಹಾಗೂ ದ್ವಿತೀಯ ಪಿಯುಸಿಯಲ್ಲಿ ಒಟ್ಟು 50 ಮುಸ್ಲಿಂ ವಿದ್ಯಾರ್ಥಿರ್ನಿಯರಿದ್ದು 32 ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸಿ ಕಾಲೇಜಿಗೆ ಬಂದಿದ್ದರು. ಹೈಕೋರ್ಟ್ ಆದೇಶ ಇರುವುದರಿಂದ ಶಿರವಸ್ತ್ರ ಧರಿಸಿ ಕಾಲೇಜು ಪ್ರವೇಶಕ್ಕೆ ಅವಕಾಶ ಇಲ್ಲ ಹಾಗಾಗಿ ಶಿರವಸ್ತ್ರ ಕಳಚಿ ಕಾಲೇಜು ಪ್ರವೇಶಿಸುವಂತೆ ಪ್ರಾಂಶುಪಾಲರು ವಿದ್ಯಾರ್ಥಿನಿಗಳಲ್ಲಿ ಮನವಿ ಮಾಡಿದರು. ಆದರೆ ಇದಕ್ಕೆ ಒಪ್ಪದ ವಿದ್ಯಾರ್ಥಿನಿಯರು ಕಾಲೇಜು ವಠಾರದಲ್ಲೇ ಕುಳಿತಿದ್ದಾರೆ.

Join Whatsapp
Exit mobile version