ಮೂರೂ ರಾಜ್ಯಗಳಲ್ಲಿ ಮೈತ್ರಿಯೊಡನೆ ಬಿಜೆಪಿ ಎರಡನೆಯ ಅವಧಿಗೆ ಸರಕಾರ ರಚಿಸುವುದಾದರೂ ಅದರ ಬಲ ಕುಸಿದಿದೆ.
ನಾಗಾಲ್ಯಾಂಡಿನ 60ರಲ್ಲಿ 59 ಬಲದ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮೈತ್ರಿ ಕೂಟವು 37 ಕಡೆ ಗೆದ್ದಿದೆ. ಎನ್‌ಡಿಡಿಪಿ 25 ಕ್ಷೇತ್ರಗಳಲ್ಲಿ ಜಯ ಕಂಡರೆ ಬಿಜೆಪಿಯು 12 ಕಡೆ ಗೆದ್ದಿದೆ.
ತ್ರಿಪುರದಲ್ಲಿ ಕಳೆದ ಬಾರಿ ಬಿಜೆಪಿ ಮೈತ್ರಿಯು ಮೂರನೆಯ ಎರಡರಷ್ಟು ಬಹುಮತದೊಡನೆ ಅಧಿಕಾರಕ್ಕೆ ಬಂದಿತ್ತು. ಈ ಬಾರಿ 60 ಬಲದ ವಿಧಾನ ಸಭೆಯಲ್ಲಿ 32 ಸ್ಥಾನ ಗೆದ್ದು ಸತತ ಎರಡನೆಯ ಬಾರಿ ಅಧಿಕಾರ ಉಳಿಸಿಕೊಂಡಿದೆ. ತೃಣಮೂಲ ಕಾಂಗ್ರೆಸ್ ಮತ್ತು ಟಿಐಪಿಆರ್‌ಎ ಮೂರನೇ ರಂಗದ ಸ್ಪರ್ಧೆ ಇಲ್ಲದಿದ್ದರೆ ಬಿಜೆಪಿ ಇಲ್ಲಿ ಗೆಲ್ಲುವ ಅವಕಾಶ ಇರಲಿಲ್ಲ.
ಮೇಘಾಲಯದಲ್ಲಿ ಕಾನ್ರಾಡ್ ಸಂಗ್ಮಾರ ಎನ್‌ಪಿಪಿ ಚುನಾವಣೆ ನಡೆದ 60ರ 59 ಸ್ಥಾನಗಳಲ್ಲಿ 26 ಕಡೆ ಗೆದ್ದಿದೆ. ಕಳೆದ ಬಾರಿಯೂ ಹೀಗೇ ಆಗಿತ್ತು. ಈಗಲೂ ಬಿಜೆಪಿ ಮತ್ತಿತರರೊಡನೆ ಸಂಗ್ಮಾ ಸರಕಾರ ರಚಿಸುವರು.
ತ್ರಿಪುರದ 60 ಬಲದ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮೈತ್ರಿ ಕೂಟವು 21 ಕಡೆ ಗೆದ್ದಿದೆ. ಮಮತಾರ ಕೂಟದ ಟಿಐಪಿಆರ್‌ಎ ಒಂದಷ್ಟು ಗೆಲುವು ಸಾಧಿಸಿರುವುದರ ಜೊತೆಗೆ ಬಿಜೆಪಿಗೆ ಕೆಲವೆಡೆ ಜೀವ ನೀಡಿದೆ.
ಈ ಎರಡೂ ಕಡೆ ಬಿಜೆಪಿ ಮತ್ತೆ ಕೆಲವರನ್ನು ಕರೆದು ಸರಕಾರ ರಚಿಸಬಹುದು.
ಮೇಘಾಲಯದ 60 ಬಲದ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಒಂದೂ ಸ್ಥಾನ ದಕ್ಕಿಲ್ಲ. ಆದರೆ ಅದರ ಗೆಳೆಯರು ಚೆದುರಿದಂತೆ ಗೆದ್ದಿದ್ದಾರೆ. ಇಲ್ಲಿ ಮರಿ ಪಕ್ಷಗಳದ್ದೇ ಕಾರುಬಾರು.