ಬೆಂಗಳೂರು: ತೈವಾನ್ಗೆ ಸಾಗಿಸಲು ಸಿದ್ಧಪಡಿಸಲಾಗಿದ್ದ ಕೋಟ್ಯಂತರ ರೂ. ಮೌಲ್ಯದ ರಕ್ತಚಂದನವನ್ನು ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ವೈಟ್ ಫೀಲ್ಡ್ನ ಕಂಟೈನರ್ ಡಿಪೋವೊಂದರಲ್ಲಿ ಮೂವರು ಆರೋಪಿಗಳ ತಂಡ ಪ್ಲೈವುಡ್ ಬಾಕ್ಸ್ ನಲ್ಲಿ ರಕ್ತಚಂದನದ ತುಂಡುಗಳನ್ನು ಇರಿಸಿಕೊಂಡು ಸಾಗಣೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ತೈವಾನ್ ಗೆ ಸಾಗಿಸಲು ಉದ್ದೇಶಿಸಿದ್ದ 4.82 ಟನ್ ರಕ್ತಚಂದನ ಜಪ್ತಿ ಮಾಡಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳಿಂದ 2.4 ಕೋಟಿ ರೂ ಮೌಲ್ಯದ 4.82 ಟನ್ ರಕ್ತಚಂದನವನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ. ಆರೋಪಿಗಳು ತೈವಾನ್ ಗೆ ರಕ್ತಚಂದನದ ತುಂಡುಗಳನ್ನು ಸಾಗಣೆ ಮಾಡಲು ಸಿದ್ಧತೆ ನಡೆಸಿಕೊಂಡಿದ್ದರು. ಆರೋಪಿಗಳು ರಕ್ತಚಂದನವನ್ನು ಎಲ್ಲಿಂದ ಸಂಗ್ರಹಿಸಿದ್ದರು ಎಂಬುದರ ತನಿಖೆಯನ್ನು ಕೈಗೊಳ್ಳಲಾಗಿದೆ.
ಆರೋಪಿಗಳು ಆಂಧ್ರಪ್ರದೇಶದಿಂದ ಕಳ್ಳಸಾಗಣೆ ಮಾಡಿಕೊಂಡು ಬಂದು ಫೈವುಡ್ ಬಾಕ್ಸ್ ಗಳಲ್ಲಿ ಪ್ಯಾಕ್ ಮಾಡಿ ಪೊಲೀಸರು ಹಾಗೂ ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಿ ತೈವಾನ್ ಗೆ ಸಾಗಿಸಲು ಮುಂದಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.